ಎಂಪಿ, ಎಂಎಲ್ ಎಗಳಿಗೆ ಬಿಗ್ ಶಾಕ್ : ಒಂದು ಸಲ ಕೇಸ್ ದಾಖಲಾದ್ರೆ ವಾಪಸ್ ಪಡೆಯೋಕಾಗಲ್ಲ..!
ನವದೆಹಲಿ: ಜನಪ್ರತಿನಿಧಿಗಳ ಕೇಸ್ ಗಳನ್ನು ನಾನಾ ಕಾರಣಗಳಿಂದ ಹಿಂಪಡೆಯಕಲಾಗುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆ ಜನಪ್ರತಿನಿಧಿಗಳಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಸಂಸದರು, ಶಾಸಕರ ವಿರುದ್ಧದ ಕೇಸ್ಗಳನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವಂತಿಲ್ಲ ಎಂದು ತೀರ್ಪು ನೀಡಿದೆ..
ಹೌದು.. ಕೇಸ್ ಗಳನ್ನು ನಡೆಸುವ ಸಂಬಂಧ ಹಲವು ರಾಜ್ಯಗಳಲ್ಲಿ ವಿಶೇಷ ಜನಪ್ರತಿನಿಧಿಗಳ ಕೋರ್ಟ್ಗಳು ಕಾರ್ಯ ನಿರ್ವಹಿಸುತ್ತಿವೆ. ಇವಲ್ಲದೇ ಇವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಿಬಿಐ ವಿಶೇಷ ಕೋರ್ಟ್ಗಳಲ್ಲಿಯೂ ನಡೆಸಲಾಗುತ್ತದೆ. ಆದರೆ ಈ ಕೋರ್ಟ್ಗಳಲ್ಲಿ ದಾಖಲಾಗಿರುವ ಕೇಸ್ಗಳ ಪೈಕಿ ಕೆಲವು ಕೇಸ್ಗಳು ಯಾವ್ಯಾವುದೋ ಕಾರಣಕ್ಕೆ ವಾಪಸ್ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ಹೊರಡಿಸಿದೆ.
ಚಿತ್ರೀಕರಣದ ವೇಳೆ ಬಿದ್ದು ಪೆಟ್ಟು ಮಾಡಿಕೊಂಡ ಪ್ರಕಾಶ್ ರಾಜ್ – ಶಸ್ತ್ರ ಚಿಕಿತ್ಸೆಗೆ ಹೈದ್ರಾಬಾದ್ ಗೆ ತೆರಳಿದ ನಟ
ಈ ಕೋರ್ಟ್ಗಳಲ್ಲಿ ದಾಖಲಾಗುವ ಸಂಸದರು, ಶಾಸಕರ ವಿರುದ್ಧದ ಕೇಸ್ಗಳನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವಂತಿಲ್ಲ. ಒಂದು ವೇಳೆ ಹಾಗೆ ಪಡೆಯುವುದೇ ಆಗಿದ್ದಲ್ಲಿ ಸಂಬಂಧಿತ ರಾಜ್ಯಗಳ ಹೈಕೋರ್ಟ್ನ ಅನುಮತಿ ಕಡ್ಡಾಯ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ, ನ್ಯಾಯಮೂರ್ತಿಗಳಾದ ವಿನೀತ್ ಶರಣ್ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿದೆ.
ಇದರಿಂದಾಗಿ ಈಗ ಶಾಸಕರು, ಸಂಸದರಿಗೆ ಕೋರ್ಟ್ ಶಾಕ್ ಕೊಟ್ಟಿದೆ. ಕೇರಳ ಸೇರಿದಂತೆ ಕೆಲವು ಕಡೆಗಳಲ್ಲಿ ಜನಪ್ರತಿನಿಧಿಗಳ ಕೋರ್ಟ್ಗಳಲ್ಲಿ ದಾಖಲಾಗುತ್ತಿರುವ ಮೊಕದ್ದಮೆಗಳನ್ನು ಏಕಾಏಕಿ ಹಿಂದಕ್ಕೆ ಪಡೆಯುತ್ತಿರುವುದು ಕಂಡುಬಂದಿದೆ.
ಅಲ್ಲದೇ ಎಂಎಲ್ಎ, ಎಂಪಿಗಳ ವಿರುದ್ಧ ಈ ಕೋರ್ಟ್ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳು ಸದ್ಯ ಅದೇ ಸ್ಥಳದಲ್ಲಿ ಮುಂದುವರೆಯಬೇಕು. ಒಂದು ವೇಳೆ ನಿವೃತ್ತಿ ಹೊಂದಿದರೆ ಅಥವಾ ನಿಧನರಾದರೆ ಮಾತ್ರ ಈ ನಿಯಮ ಅನ್ವಯ ಆಗುವುದಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ..








