Suresh gowda: ನನ್ನ ಹತ್ಯೆಗೆ ಹಾಲಿ ಶಾಸಕ ಸುಪಾರಿ ಕೊಟ್ಟಿದ್ದಾರೆ – ಸುರೇಶ್ ಗೌಡ ಆರೋಪ
ಜೆಡಿಎಸ್ ಶಾಸಕ ಗೌರಿಶಂಕರ್ ನನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆಂದು ಮಾಜಿ ಶಾಸಕ ಬಿಜೆಪಿಯ ಸುರೇಶ್ ಗೌಡ ಆರೋಪಿಸಿದ್ದಾರೆ.
ತುಮಕೂರು ಗ್ರಾಮಾಂತರದ ಜೆಡಿಎಸ್ ಶಾಸಕ ಗೌರಿಶಂಕರ್ ನನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆಂದು ಬಿಜೆಪಿಯ ಸುರೇಶ್ ಗೌಡ ಆರೋಪಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗೌರಿಶಂಕರ್ ನನ್ನ ಹತ್ಯೆ ಮಾಡಲು ಬೆಂಗಳೂರಿನ ಜೈಲಿನಲ್ಲಿರುವ ಕೈದಿಗಳಿಗೆ ಸುಫಾರಿ ಕೊಟ್ಟಿದ್ದಾರೆ.
ನಿನಗೆ ತಾಕತ್ತಿದ್ದರೆ ನನ್ನ ಒಂದು ಕೂದಲು ಮುಟ್ಟು ನೋಡೋಣ. ನಮ್ಮ ಕಾರ್ಯಕರ್ತರು, ಅಭಿಮಾನಿಗಳು ಇರುವವರೆಗೂ ನಿನ್ನ ಆಟ ನಡೆಯಲ್ಲ. ಈಗಾಗಲೇ ನಮ್ಮ ಶಕ್ತಿ ಏನೆಂದು ಕ್ಷೇತ್ರದಲ್ಲಿ ತೋರಿಸಿದ್ದೇವೆ ಎಂದು ಬಿಜೆಪಿಯ ಸುರೇಶ್ ಗೌಡ ಕಿಡಿಕಾರಿದ್ದಾರೆ.
ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಸುರೇಶ್ ಗೌಡ ಅಪಪ್ರಚಾರ ನಡೆಸುತ್ತಾ ಇದ್ದಾರೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಹಾಗಿರುವಾಗ ಸುಳ್ಳು ಆರೋಪ ಮಾಡುವುದು ಬಿಟ್ಟು ತನಿಖೆ ನಡೆಸಲಿ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಜನರಿಗೆ ನಿಜಾಂಶ ತಿಳಿಸುವಂತೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಶಾಸಕ ಗೌರಿಶಂಕರ್ ಸ್ಪಷ್ಟನೆ ನೀಡಿದ್ದಾರೆ.
Suresh Gowda: Sitting MLA Contributed to My Murder – Suresh Gowda Alleges