ಕಂಬಿ ಹಿಂದೆ ಸುಶೀಲ್ : ಬೇಡವಾದ ಕಾರಣಕ್ಕೆ ಜೈಲು ಸೇರಿದ್ದ ಸ್ಟಾರ್ ಆಟಗಾರರು
ಹೈದರಾಬಾದ್ : ರೆಸ್ಲರ್ ಸಾಗರ್ ರಾಣಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ಸ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಎರಡು ಬಾರಿ ಪದಕ ಗೆದ್ದಿದ್ದ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆಯಿದ್ದ ಅಜಯ್ ಕುಮಾರ್ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ರೈಲ್ವೇ ಉದ್ಯೋಗದಿಂದ ಅಮಾನತು ಮಾಡಲಾಗಿದೆ.
ಸದ್ಯ ಸುದ್ದಿ ಕ್ರೀಡಾ ಜಗತ್ತಿನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ವಿಶ್ವಾದ್ಯಂತ ಕೆಲವು ಜನಪ್ರಿಯ ಕ್ರಿಕೆಟಿಗರು ವಿವಿಧ ಕಾರಣಗಳಿಗಾಗಿ ಕಂಬಿ ಹಿಂದೆ ಹೋಗಿ ಬಂದಿದ್ದಾರೆ. ನಮ್ಮ ಭಾರತದ ಕ್ರಿಕೆಟರ್ ಗಳ ವಿಚಾರಕ್ಕೆ ಬಂದ್ರೆ ಸುರೇಶ್ ರೈನಾ, ಪ್ರವೀಣ್ ಕುಮಾರ್, ಅಮಿತ್ ಮಿತ್ರಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಅಂತಾ ಗುರುತಿಸಿಕೊಂಡಿದ್ದ ಸುರೇಶ್ ರೈನಾ ಅವರನ್ನು ಕಳೆದ ವರ್ಷ ಬಂಧನ ಮಾಡಲಾಗಿತ್ತು.
ರೈನಾ ಕೋವಿಡ್-19 ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಮುಂಬೈ ಪೆÇಲೀಸರು ಬಂಧಿಸಿದ್ದರು. ಮಹಾರಾಷ್ಟ್ರದಲ್ಲಿ ರಾತ್ರಿ ವೇಳೆ ಕಫ್ರ್ಯೂ ಇದ್ದರೂ ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಮುಂಬೈ ಡ್ರಾಗನ್ ಫ್ಲೈ ಕ್ಲಬ್ ನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಕ್ಕೆ ರೈನಾ ಸೇರಿ 34 ಮಂದಿಯನ್ನು ಬಂಧಿಸಲಾಗಿತ್ತು.
ಇನ್ನು ಸದಾ ಮುಂಗೋಪಿಯಾಗಿರುವ ಬೌಲರ್ ಪ್ರವೀಣ್ ಕುಮಾರ್ ಅವರನ್ನ 2019ರಲ್ಲಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನ ಮಾಡಲಾಗಿತ್ತು. ಪಿಕೆ ಕುಡಿದ ಮತ್ತಿನಲ್ಲಿ ಮಗ ಹಾಗೂ ನೆರೆಹೊರೆಯವರು ಸಹಾಯದಿಂದ ಬಸ್ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದರು.
ಇನ್ನು ಮಾಜಿ ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳೆ ಕೂಡ ಮನೆ ಕೆಲಸದಾಕೆಗೆ ಹಿಂಸೆ ನೀಡಿದ ಆರೋಪದಲ್ಲಿ ಠಾಣೆಯ ಮೆಟ್ಟಿಲೇರಿದ್ದರು. 2015ರಲ್ಲಿ ವಿನೋದ್ ಕಾಂಬ್ಳೆ ಮೇಲೆ ಅವರದೇ ಮನೆ ಕೆಲಸ ಮಾಡುವ ಹೆಣ್ಣು ಮಗಳು ಪ್ರಕರಣ ದಾಖಲಿಸಿದ್ದರು. ಕಾಂಬ್ಳೆ ಮತ್ತು ಅವನ ಹೆಂಡತಿ ತನ್ನನ್ನು ಮನೆಗೆ ಮರಳಲು ಬಿಡುತ್ತಿಲ್ಲ, ಸಂಬಳ ಕೇಳಿದರೆ ಹಿಂಸೆ ನೀಡುತ್ತಿದ್ದಾರೆ ಎಂದು ಬಾಂದ್ರಾ ಪೆÇಲೀಸ್ ಠಾಣೆಯಲ್ಲಿ ಕಾಂಬ್ಳೆ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.
ಕೊನೆಯದಾಗಿ ಬಾಲಿವುಡ್ ಚಿತ್ರ ನಿರ್ಮಾಪಕಿ, ಗೆಳತಿ ವಂದನಾ ಜೈನ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ರಿಕೆಟಿಗ ಅಮಿತ್ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದರು.









