Suryakumar | ವಿಶ್ವದಾಖಲೆ ಬರೆದ ಸೂರ್ಯ ಭಾಯ್
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ವಿಧ್ವಂಸಕ ಬ್ಯಾಟಿಂಗ್ ನಡೆಸಿದರು.
ಕೇವಲ 22 ಎಸೆತಗಳಲ್ಲಿ ಐದು ಬೌಂಡರಿ, ಐದು ಸಿಕ್ಸರ್ ಗಳೊಂದಿಗೆ 61 ರನ್ ಗಳನ್ನು ಸಾಧಿಸಿದರು.
ಇದರೊಂದಿಗೆ ಸೂರ್ಯ ಟಿ 20 ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಈ ಪಂದ್ಯದಲ್ಲಿ ವೈಯಕ್ತಿಕವಾಗಿ 24 ರನ್ ಗಳಿಸುವುದರೊಂದಿಗೆ ಟಿ 20 ಕ್ರಿಕೆಟ್ ನಲ್ಲಿ 1000 ರನ್ ಗಡಿಯನ್ನು ದಾಟಿದರು.
ಅದರಲ್ಲೂ ಸೂರ್ಯ ಭಾಯ್ ಕೇವಲ 573 ಎಸೆತಗಳಲ್ಲಿಯೇ ಈ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ಟಿ 20 ಕ್ರಿಕೆಟ್ ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 1000 ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

ಇದಕ್ಕೂ ಮುನ್ನಾ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಮ್ಯಾಕ್ಸ್ ವೆಲ್ ಹೆಸರಿನಲ್ಲಿ ಈ ದಾಖಲೆ ಇತ್ತು. ಮ್ಯಾಕ್ಸಿ 604 ಎಸೆತಗಳಲ್ಲಿ ಸಾವಿರ ರನ್ ಪೂರೈಸಿದ್ದರು.
ಅದೇ ರೀತಿ ಪಂದ್ಯದಲ್ಲಿ ಸೂರ್ಯ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಅತಿ ಕಡಿಮೆ ಎಸೆತಗಳಲ್ಲಿ ಅರ್ಧ ಶತಕ ಸಾಧಿಸಿದ ಮೂರನೇ ಭಾರತದ ಬ್ಯಾಟರ್ ಎನಿಸಿಕೊಂಡರು.
ಇದಕ್ಕು ಮೊದಲು ಯುವರಾಜ್ ಸಿಂಗ್ 2007ರ ಟಿ 20 ವಿಶ್ವಕಪ್ ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.
ಮತ್ತೊಂದು ಕಡೆ ಕೆ.ಎಲ್.ರಾಹುಲ್ 2021ರಲ್ಲಿ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದೀಗ ಸೂರ್ಯ ಕುಮಾರ್ ಕೂಡ 18 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.