ಸುಶಾಂತ್ ಸಿಂಗ್ ಆತ್ಮದೊಂದಿಗೆ ಸಂವಹನ ನಡೆಸಿದ
ಪ್ಯಾರಾನಾರ್ಮಲ್ ತಜ್ಞ ಸ್ಟೀವ್ ಹಫ್
ಮುಂಬೈ, ಜುಲೈ 21: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ ಹಂತದಲ್ಲಿದೆ. ಸುಶಾಂತ್ ಅವರ ಅತ್ಯಂತ ಆಪ್ತರನ್ನು ಇಲ್ಲಿಯವರೆಗೆ ಪ್ರಶ್ನಿಸಲಾಗಿದ್ದು, ಸುಶಾಂತ್ ಸಿಂಗ್ ಅವರ ಮರಣದ ನಂತರ, ಹಲವು ಬಾಲಿವುಡ್ ತಾರೆಗಳ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ಅನೇಕರು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರ ಕೊಲೆ ಮಾಡಲಾಗಿದೆ ಎಂದು ನಂಬಿದ್ದಾರೆ. ಆದಾಗ್ಯೂ, ಇದು ಇನ್ನೂ ತನಿಖೆಯಲ್ಲಿದ್ದು, ಒಂದು ತಿಂಗಳಾದರೂ, ಅವರ ಸಾವಿನ ರಹಸ್ಯ ಇನ್ನೂ ಬಗೆಹರಿದಿಲ್ಲ, ಸುಶಾಂತ್ ಸಿಂಗ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅವರ ಸಾವಿನ ಬಗ್ಗೆ ಸಿಬಿಐ ತನಿಖೆಗೆ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.

ಅದೇ ಸಮಯದಲ್ಲಿ, ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮದೊಂದಿಗೆ ಪ್ರಸಿದ್ಧ ಪ್ಯಾರಾನಾರ್ಮಲ್ ತಜ್ಞ ಸ್ಟೀವ್ ಹಫ್ ಅವರು ಸಂವಹನ ನಡೆಸಿದ್ದಾರೆ ಎಂದು ಹೇಳಿರುವ ಹೊಸ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸ್ಟೀವ್ ಹಫ್ ಪ್ರಕಾರ, ಅವರು ಸುಶಾಂತ್‌ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಅದಕ್ಕೆ ಉತ್ತರವನ್ನು ಪಡೆದಿದ್ದಾರೆ. ಸ್ಟೀವ್ ಹಫ್ ಸುಶಾಂತ್ ಅವರ ಆತ್ಮಕ್ಕೆ ಅನೇಕ ಪ್ರಶ್ನೆಗಳನ್ನು ಕೇಳಿದ್ದು, ಸ್ಟೀವ್ ಪ್ರಶ್ನೆ ಕೇಳಿದಾಗ, ಉತ್ತರವು ಯಂತ್ರದಿಂದ ಬರುತ್ತದೆ. ಸ್ಟೀವ್ ‘ನಿಮ್ಮ ಸಾವಿಗೆ ಮೊದಲು ಏನಾಯಿತು?’ ಎಂದು ಸುಶಾಂತ್ ಅವರ ಆತ್ಮದ ಬಳಿ ಕೇಳಿದ್ದು, ಅದಕ್ಕೆ ಪ್ರತಿಕ್ರಿಯೆಯಾಗಿ, ಯಂತ್ರದಿಂದ ಒಂದು ಧ್ವನಿ, ಒಬ್ಬ ವ್ಯಕ್ತಿಯೊಂದಿಗೆ ಸಾಕಷ್ಟು ಚರ್ಚೆಗಳು ನಡೆದವು ಎಂದು ಉತ್ತರಿಸಿದೆ. ಅದರ ನಂತರವೂ ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೂ ಉತ್ತರಿಸಲಾಗಿದೆ. ಒಟ್ಟು ಎರಡು ವಿಡಿಯೋಗಳಲ್ಲಿ ಸುಶಾಂತ್ ಮಾತನಾಡಿರುವ ಧ್ವನಿ ಇದ್ದು, ಸ್ಟೇವ್ ಕೇಳಿದ ಪ್ರಶ್ನೆಗಳಿಗೆ ಸುಶಾಂತ್ ಸಿಂಗ್ ಉತ್ತರಿಸುತ್ತಾ ಹೋಗಿದ್ದಾರೆ.








