ಸುಶಾಂತ್ ತಂದೆ ಮಾಡಿರುವ ಆರೋಪಗಳು ದುರುದ್ದೇಶದಿಂದ ಕೂಡಿದೆ: ರೆಹಾ.!

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿರುವ ರೆಹಾ ಸದ್ಯಕ್ಕೆ ಭಾರೀ ಚರ್ಚೆಯಲ್ಲಿದ್ದಾರೆ. ರೆಹಾ ವಿರುದ್ಧ ಸುಶಾಂತ್ ತಂದೆ ಕೆಕೆ ಸಿಂಗ್ ಪಟ್ನಾ ಠಾಣೆಯಲ್ಲಿ ಕಳ್ಳತನ, ಮೋಸ, ಮಾನಸಿಕ ಕಿರುಕುಳದ ದೂರು ದಾಖಲಿಸಿದ್ದೇ ತಡ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಸುಶಾಂತ್ ಪ್ರೇಯಸಿ ರೆಹಾ ಚಕ್ರಬೊರ್ತಿ. ಇನ್ನೂ ಮುಂಬೈನ ನಿವಾಸದಿಂದ ರೆಹಾ ಪರಾರಿಯಾಗಿದ್ದ ಸುದ್ದಿ ನೆಟ್ಟಿಗರ ಅನುಮಾನಕ್ಕೆ ನೀರೆರೆಯುವ ಕೆಲಸ ಮಾಡಿತ್ತು. ಇದೀಗ ಈ ಬಗ್ಗೆ ತುಟಿಬಿಚ್ಚಿರುವ ರೆಹಾ ನನ್ನ ವಿರುದ್ಧ ಸುಶಾಂತ್ ತಂದೆ ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ.
ಹೌದು ಸುಶಾಂತ್ ತಂದೆ ಕೆ.ಕೆ. ಸಿಂಗ್ ಮಾಡಿರುವ ಆರೋಪಗಳು ಸುಳ್ಳು ಮತ್ತು ದುರುದ್ದೇಶದಿಂದ ಸೃಷ್ಟಿಸಿರುವ ಆರೋಪ ಎಂದು ಸುಪ್ರೀಂಕೋರ್ಟ್ಗೆ ರೆಹಾ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಂದ್ಹಾಗೆ ಬಿಹಾರದಲ್ಲಿ ನೀಡಿರುವ ದೂರಿನ ವಿಚಾರಣೆಯನ್ನು ಮುಂಬೈಗೆ ವರ್ಗಾಯಿಸಬೇಕು ಎಂದು ಕೋರಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಹಲವು ವಿಷಯಗಳ ಬಗ್ಗೆ ರೆಹಾ ಉಲ್ಲೇಖಿಸಿದ್ದಾರೆ. ಸುಶಾಂತ್ ತಂದೆ ಮಾಡಿರುವ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ರೆಹಾ ಪಟ್ನಾದಲ್ಲಿ ಅವರಿಗೆ ಬಹಳ ಪ್ರಭಾವ ಇದೆ. ಹೀಗಾಗಿ ಸ್ಥಳೀಯ ಅಧಿಕಾರಿಗಳ ಸಹಾಯದಿಂದ ತನಿಖೆಯನ್ನು ತಮಗೆ ಬೇಕಾದಂತೆ ನಡೆಸಬಹುದು. ಇದರಿಂದಾಗಿ ನ್ಯಾಯ ಸಮ್ಮತ ವಿಚಾರಣೆ ನಡೆಯಲಾರದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಇದರ ಹೊರತಾಗಿ ಅರ್ಜಿಯಲ್ಲಿ ಇನ್ನೂ ಹಲವಾರು ವಿಚಾರಗಳನ್ನ ಬಹಿರಂಗಪಡಿಸಿರುವ ರೆಹಾ ಸುಶಾಂತ್ ಕೆಲವು ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು ಮತ್ತು ಖಿನ್ನತೆ ನಿಗ್ರಹದ ಔಷಧ ತೆಗೆದುಕೊಳ್ಳುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಪ್ರಕರಣದ ವ್ಯಾಪ್ತಿ ಇರುವುದು ಬಾಂದ್ರಾ ಪೊಲೀಸ್ ಠಾಣೆಯಲ್ಲಿ. ಈ ಪ್ರಕರಣದಲ್ಲಿ ಬಿಹಾರದ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲಾರರು. ಹೀಗಾಗಿ ಈ ಎಫ್ಐಆರ್ನ ತನಿಖೆಯನ್ನು ಮುಂಬೈಗೆ ವರ್ಗಾಯಿಸಬೇಕು ಎಂದು ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ ರೆಹಾ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This