ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾಗೆ ಪಿಎನ್ ಜಿ ಸವಾಲ್ Bangladesh saaksha tv
ದುಬೈ : ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ರಂಗೇರಿದ್ದು, ಕ್ರಿಕೆಟ್ ಶಿಶುಗಳ ಮಧ್ಯೆ ನಡೆಯುತ್ತಿರುವ ಹೋರಾಟ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ. ಸೂಪರ್ 12ರ ಹಂತಕ್ಕೆ ಎಂಟ್ರಿ ಕೊಡಲು ತಂಡಗಳು ಭಾರಿ ಕಸರತ್ತು ನಡೆಸುತ್ತಿವೆ.
ಸದ್ಯ ನಡೆದಿರುವ ಪಂದ್ಯಗಳ ಫಲಿತಾಂಶ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ. ಅದರಲ್ಲೂ ಗೆಲ್ಲುವ ಹಾಟ್ ಫೇವರೇಟ್ ತಂಡಗಳೇ ಮಣ್ಣುಮುಕ್ಕುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಅಂದಹಾಗೆ ಇಂದು ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಮಹತ್ವದ ಪಂದ್ಯ ಇದ್ದು, ಟೂರ್ನಿಯಲ್ಲಿ ಉಳಿಯಬೇಕೆಂದರೇ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಪಪುವಾ ನ್ಯೂ ಗಿನಿಯಾ ತಂಡ ಸವಾಲ್ ಹಾಕಿದೆ.
ಈ ಪಂದ್ಯ ಇಂದು ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಕಳೆದ ಪಂದ್ಯದಲ್ಲಿ ಓಮನ್ ವಿರುದ್ಧ ಜಯ ಸಾಧಿಸಿರುವ ಬಾಂಗ್ಲಾ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.