ಟಿ-20 ಸಮರಕ್ಕೆ ಕೊಹ್ಲಿ ಸೈನ್ಯ ರೆಡಿ : ಧೋನಿಗೆ ಮಣೆ ಹಾಕಿದ್ಯಾಕೆ ಬಿಸಿಸಿಐ..?

1 min read
T20-world-cup saaksha tv

ಟಿ-20 ಸಮರಕ್ಕೆ ಕೊಹ್ಲಿ ಸೈನ್ಯ ರೆಡಿ : ಧೋನಿಗೆ ಮಣೆ ಹಾಕಿದ್ಯಾಕೆ ಬಿಸಿಸಿಐ..?

ಮುಂಬೈ : ಯುಎಇನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಕೆಲ ಅಚ್ಚರಿ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯಾ, ರವೀಂದ್ರ ಜಡೇಜಾ, ರಾಹುಲ್ ಚಹರ್, ಆರ್.ಅಶ್ವಿನ್, ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮೇಲ್ನೋಟಕ್ಕೆ ತಂಡ ಬಲಿಷ್ಠವಾಗಿಯೇ ಇದ್ದು, ಆಡುವ ಹನ್ನೊಂದರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಅನ್ನೋದು ಕಾದುನೋಡಬೇಕಿದೆ.T20-world-cup saaksha tv

ಇನ್ನು ಬಿಸಿಸಿಐ ಅಳೆದುತೂಗಿ ತಂಡವನ್ನು ಪ್ರಕಟ ಮಾಡಿದ್ದು, ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರನ್ನು ತಂಡದ ಮೆಂಟರ್ ಆಗಿ ನೇಮಕ ಮಾಡಲಾಗಿದೆ.

ಇದು ತಂಡಕ್ಕೆ ಪ್ಲಸ್ ಆಗುತ್ತೋ ಮೈನಸ್ ಆಗುತ್ತೋ ಅನ್ನೋ ಲೆಕ್ಕಾಚಾರಗಳು ಸದ್ಯ ಆರಂಭಗೊಂಡಿವೆ. ಒಂದು ಚಾಂಪಿಯನ್ಸ್ ಟ್ರೋಪಿ, ಎರಡು ವಿಶ್ವಕಪ್ ಗೆದ್ದಿರುವ ಧೋನಿಯ ಮಾರ್ಗದರ್ಶನ ಕೊಹ್ಲಿ ಸೈನ್ಯಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷನೆ ಮಾಡುತ್ತಿದ್ದಾರೆ.

ಇನ್ನು ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ಟೂರ್ನಿ ನಡೆಯಲಿದೆ. ಭಾರತ ತಂಡ ಅಕ್ಟೋಬರ್ 24ರಂದು ಪಾಕ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ವಿಶ್ವಕಪ್? ಅಭಿಯಾನ ಆರಂಭಿಸಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd