T20 World Cup 2022: ಅರ್ಹತಾ ಪಂದ್ಯದಲ್ಲಿ ಗೆದ್ದು ಬೀಗಿದ ನೆದರ್ಲೆಂಡ್ಸ್
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ 3 ವಿಕೆಟ್‌ಗಳಿಂದ ಯುಎಇ ತಂಡವನ್ನು ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ನೆದರ್ಲೆಂಡ್ಸ್ ಎದುರು 112 ರನ್ ಗಳ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ನೆದರ್ಲೆಂಡ್ ಒಂದು ಎಸೆತ ಭಾಕಿ ಇರುವಂತೆ ಗುರಿ ತಲುಪಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಯುಎಇ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪವರ್ ಪ್ಲೇನಲ್ಲಿ ಯುಎಇ ತಂಡ ಮೊದಲ ವಿಕೆಟ್ ಗಳಿಗೆ 31 ರನ್ ಗಳಿಸಲಷ್ಟೇ ಶಕ್ತವಾಯಿತು.
ಯುಎಇಯ ಮಧ್ಯಮ ಕ್ರಮಾಂಕ ಕೂಡ ವಿಫಲವಾಯಿತು. ಆರಂಭಿಕ ಆಟಗಾರ ಮೊಹಮ್ಮದ್ ವಾಸಿಮ್ 91 ರನ್ ಗಳಿಸಿ ಔಟಾದ ನಂತರ ಯಾವುದೇ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡೆ 3 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರು. ಫ್ರೆಡ್ ಕ್ಲಾಸೆನ್ 4 ಓವರ್‌ಗಳಲ್ಲಿ 13ಕ್ಕೆ 2 ವಿಕೆಟ್ ಪಡೆದರೆ ಅವರು ಪಂದ್ಯದ ಆಟಗಾರರಾದರು.
T20 World Cup 2022: UAE Vs Netherlands Score Updates | Chirag Suri Kashif Daud Bas De Leede