ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ ಔಟ್, 3 ರನ್ಗಳಿಂದ ಗೆದ್ದರೂ ವಿಂಡೀಸ್ ಸೆಮಿಫೈನಲ್ ಸ್ಥಾನ ಡೌಟ್..!
ಬಾಂಗ್ಲಾದೇಶ ಮತ್ತು ವೆಸ್ಟ್ಇಂಡೀಸ್ ಫೀಲ್ಡರ್ಗಳು ಕ್ಯಾಚ್ ಡ್ರಾಪ್ ಮಾಡಿದ್ರು. ರನೌಟ್ಗಳನ್ನು ಮಿಸ್ ಮಾಡಿದ್ರು. ಬ್ಯಾಟ್ಸ್ಮನ್ಗಳು ಪಂದ್ಯ ಗೆಲ್ಲಿಸಿಕೊಡುವ ಹರಸಾಹಸ ಪಟ್ಟರೂ ಬೌಲರ್ಗಳು ಮ್ಯಾಚ್ ವಿನ್ನರ್ಗಳಾದ್ರು. ಬಾಂಗ್ಲಾದೇಶದ ವಿರುದ್ಧ ವೆಸ್ಟ್ಇಂಡೀಸ್ 3 ರನ್ಗಳ ರೋಚಕ ಜಯ ದಾಖಲಿಸಿದರೂ ಸೆಮಿಫೈನಲ್ ಸ್ಥಾನ ಇನ್ನೂ ಡೌಟ್ನಲ್ಲೇ ಇದೆ. ಆದರೆ ಸತತ 3 ಪಂದ್ಯಗಳನ್ನು ಸೋತ ಬಾಂಗ್ಲಾದೇಶ ಟೂರ್ನಿಯಲ್ಲಿ ಇನ್ನುಳಿದ ಎರಡು ಪಂದ್ಯ ಆಡಿ ಮನೆಗೆ ಹೋಗಬೇಕಾಗಿದೆ.
ಶಾರ್ಜಾದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ವೆಸ್ಟ್ಇಂಡೀಸ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಕ್ರಿಸ್ಗೇಲ್ (4ರನ್), ಎವಿನ್ ಲೆವಿಸ್ (6 ರನ್) ಮತ್ತು ಶಿಮ್ರಾನ್ ಹೆಟ್ಮಯರ್ (9 ರನ್) ಪವರ್ ಪ್ಲೇ ಮುಗಿಯುವ ಒಳಗೆ ಆಟ ಮುಗಿಸಿ ಆಗಿತ್ತು. ಕಿರಾನ್ ಪೊಲ್ಲಾರ್ಟ್ (14 ರನ್) ಗಾಯಗೊಂಡು ಹೊರನಡೆದರೆ, ಆಂಡ್ರೆ ರಸೆಲ್ ಒಂದೇ ಒಂದು ಬಾಲ್ ಎದುರಿಸದೆ ಬ್ಯಾಟಿಂಗ್ ಮುಗಿಸಿದ್ದರು.
ಸಂಕಷ್ಟದಲ್ಲಿದ್ದ ವೆಸ್ಟ್ಇಂಡೀಸ್ ತಂಡವನ್ನು ಮೇಲಕ್ಕೆತ್ತಿದ್ದು ರೋಸ್ಟನ್ ಚೇಸ್ ಮತ್ತು ನಿಕೊಲಸ್ ಪೂರನ್. ಚೇಸ್ 39 ರನ್ಗಳಿಸಿದ್ದರೆ, ಪೂರನ್ ಅಬ್ಬರದ 40 ರನ್ಗಳಿಸಿದರು. 20 ಓವರುಗಳಲ್ಲಿ ವೆಸ್ಟ್ಇಂಡೀಸ್ 7 ವಿಕೆಟ್ ಕಳೆದುಕೊಂಡು 142 ರನ್ಗಳಿಸಿತ್ತು.
ಚೇಸಿಂಗ್ಗೆ ಹೊರಟ ಬಾಂಗ್ಲಾದೇಶ ಕೂಡ ಮುಗ್ಗರಿಸಿತು. ನಯೀಮ್(17 ರನ್), ಶಕೀಬ್ (9 ರನ್) ಮತ್ತು ಮುಷ್ಫಿಕರ್ (8 ರನ್)ಬೇಗನೆ ಔಟಾದರು. ಸೌಮ್ಯ ಸರ್ಕಾರ್ 17 ರನ್ಗಳಿಸಿದರು. ಆದರೆ ಲಿಟನ್ ದಾಸ್ ಮತ್ತು ಮೊಹಮ್ಮದುಲ್ಲಾ ಬಾಂಗ್ಲಾದ ಚೇಸಿಂಗ್ಗೆ ಜೀವ ತುಂಬಿದರು. ದಾಸ್ 44 ರನ್ಗಳಿಸಿ ಇನ್ನೇನು ಪಂದ್ಯ ಗೆಲ್ಲಿಸಿದರು ಅನ್ನುವಾಗಲೇ 19ನೇ ಓವರ್ನ ಕೊನೆಯ ಎಸೆತದಲ್ಲಿ ಔಟಾದರು.
ಕೊನೆಯ ಓವರ್ನಲ್ಲಿ ಬಾಂಗ್ಲಾದೇಶದ ಗೆಲುವಿಗೆ 13 ರನ್ಗಳು ಬೇಕಿತ್ತು. ಆದರೆ ಮೊಹಮ್ಮದುಲ್ಲಾ (ಅಜೇಯ 31 ರನ್) ಮತ್ತು ಅಫೀಫ್ (ಅಜೇಯ 2ರನ್) ಕೇವಲ 9 ರನ್ ಅಷ್ಟೇ ಗಳಿಸಿದರು. ರಸೆಲ್ ಬೌಲಿಂಗ್ ಮೂಲಕ ತಂಡಕ್ಕೆ 3 ರನ್ಗಳ ಜಯ ತಂದುಕೊಟ್ಟರು. ವೆಸ್ಟ್ಇಂಡೀಸ್ 3ನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದರೆ, ಬಾಂಗ್ಲಾದೇಶ ಸೋಲಿನ ಮೂಲಕ ಟೂರ್ನಿಯಲ್ಲಿ ಔಪಚಾಚಾರಿಕತೆಯನ್ನು ಮಾತ್ರ ಉಳಿಸಿಕೊಂಡಿದೆ.