ಸೆಮಿಫೈನಲ್ಗೆ ಮುನ್ನ ಪಾಕ್ಗೆ ಅಭ್ಯಾಸ ಪಂದ್ಯ, ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ ಬಲಿಷ್ಠ ಪಾಕಿಸ್ತಾನ
ಅಬುದಾಭಿಯಲ್ಲಿ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವೆ ಟೀಮ್ ಇಂಡಿಯಾದ ಭವಿಷ್ಯ ನಿರ್ಧರಿಸುವ ಪಂದ್ಯ ನಡೆದರೆ ಇತ್ತ ಶಾರ್ಜಾದಲ್ಲಿ ಪಾಕಿಸ್ತಾನದ ಪಾಲಿಗೆ ಅಭ್ಯಾಸ ಪಂದ್ಯದ ತರಹ ಇನ್ನೊಂದು ಪಂದ್ಯ ನಡೆಯಲಿದೆ. ಈಗಾಗಲೇ ಸೆಮಿಫೈನಲ್ನಲ್ಲಿ ಸ್ಥಾನ ಗಟ್ಟಿಮಾಡಿಕೊಂಡಿರುವ ಪಾಕಿಸ್ತಾನ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ. ಗ್ರೂಪ್ನಲ್ಲಿ ಅಜೇಯ ತಂಡವಾಗಿ ಸೆಮಿಫೈನ್ಗೇರುವ ಲೆಕ್ಕಾಚಾರ ಹಾಕಿರುವ ಪಾಕಿಸ್ತಾನ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಿದೆ.
ಪಾಕಿಸ್ತಾನ ಈವರೆಗೆ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಸ್ಕಾಟ್ಲೆಂಡ್ 4ರಲ್ಲೂ ಹೀನಾಯವಾಗಿ ಸೋತಿದೆ. ಹೀಗಾಗಿ ಈ ಪಂದ್ಯ ಪಾಕ್ ಪಾಲಿಗೆ ದೊಡ್ಡ ಕಷ್ಟವಲ್ಲ. ಪಾಕಿಸ್ತಾನದ ಬ್ಯಾಟಿಂಗ್ ಸೂಪರ್ ಆಗಿ ಕಾಣುತ್ತಿದೆ. ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ನೀಡುತ್ತಿರುವ ಆರಂಭ ತಂಡಕ್ಕೆ ವಿಶ್ವಾಸ ತುಂಬಿದೆ. ಫಖರ್ ಜಮಾನ್ ಮತ್ತು ಮೊಹಮ್ಮದ್ ಹಫೀಜ್ ಅನುಭವ ಕೂಡ ಬೋನಸ್. ಶೋಯೆಬ್ ಮಲಿಕ್ ಮತ್ತು ಅಸಿಫ್ ಅಲಿಯ ರೆಡ್ ಹಾಟ್ ಫಾರ್ಮ್ ಪಂದ್ಯವನ್ನು ಮುಗಿಸಿಕೊಡುತ್ತಿದೆ.
ಗೆದ್ದು ಬಾ ಅಫ್ಘಾನಿಸ್ತಾನ…! ಇದು ಭಾರತೀಯ ಅಭಿಮಾನಿಗಳ ಪ್ರಾರ್ಥನೆ..!
ಬೌಲಿಂಗ್ ಬಗ್ಗೆ ಮಾತೇ ಇಲ್ಲ. ಶಾಹಿನ್ ಅಫ್ರಿದಿಯ ಜೊತೆ ಹಸನ್ ಅಲಿ ಮತ್ತು ಹ್ಯಾರಿಸ್ ರೌಫ್ ಎದುರಾಳಿಗಳನ್ನು ಚಿಂದಿ ಉಡಾಯಿಸಿದ್ದಾರೆ. ಇಮಾದ್ ವಾಸಿಂ ಮತ್ತು ಶದಾಬ್ ಮಲಿಕ್ ಸ್ಪಿನ್ ಬೌಲಿಂಗ್ ಗೆ ಕಂಟ್ರೋಲ್ ತಂದಿದ್ದಾರೆ. ಸ್ಕಾಟ್ಲೆಂಡ್ ತಂಡದ ಬಗ್ಗೆ ಹೇಳುವುದು ಕಷ್ಟ. ಕೈಲ್ ಕೊಯೆಟ್ಜರ್ ಮತ್ತು ಜಾರ್ಜ್ ಮುನ್ಸೆ ಮಾತ್ರ ಬ್ಯಾಟಿಂಗ್ ಬಲ. ಉಳಿದವರು ಸಾಂಘೀಕ ಆಟ ಆಡಬೇಕು. ಬೌಲಿಂಗ್ನಲ್ಲಿ ಮಾರ್ಕ್ ವ್ಯಾಟ್, ಬ್ರಾಡ್ ವ್ಹೀಲ್ರಂತಹ ಪ್ರತಿಭಾನ್ವಿತರು ಇದ್ದಾರೆ. ಒಟ್ಟಿನಲ್ಲಿ ಶಾರ್ಜಾದಲ್ಲಿ ಪಾಕಿಸ್ತಾನ ಅಜೇಯ ದಾಖಲೆ ಉಳಿಸಿಕೊಳ್ಳು ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.