T20 World Cup | ಅಬುಧಾಬಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಟೀಮ್ ಇಂಡಿಯಾ

1 min read
Team India saakshatv

ಅಬ್ಬರಿಸಿ ಬೊಬ್ಬಿರಿದ ಟೀಮ್ ಇಂಡಿಯಾ- ಅಬುಧಾಬಿಯಲ್ಲಿ ಹೀನಾಯ ಸೋಲುಕಂಡ ಅಫ್ಘಾನಿಸ್ತಾನ

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಕೈ ಕೊಟ್ಟಿದ್ದ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳು ಅಫ್ಘಾನಿಸ್ತಾನದ ವಿರುದ್ಧ ಮಿಂಚಿದರು.

ಬೌಲರ್ಗಳು ಕೂಡ ಲಯ ಕಂಡುಕೊಂಡ್ರು. ಟೀಮ್ ಇಂಡಿಯಾದ ಸಾಂಘೀಕ ಹೋರಾಟ ಎದುರು ಅಫ್ಘಾನಿಸ್ತಾನದ ಎಲ್ಲಾ ಗೇಮ್ಪ್ಲಾನ್ಗಳು ಫ್ಲಾಪ್ ಆಯಿತು.

ಅಬುಧಾಬಿ ಮೈದಾನದಲ್ಲೂ ಟೀಮ್ ಇಂಡಿಯಾಕ್ಕೆ ಟಾಸ್ ಕೈ ಕೊಟ್ಟಿತು.

ಸತತ ಮೂರನೇ ಬಾರಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ ಈ ಬಾರಿ ಎಡವಲಿಲ್ಲ.

ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ಗೆ ಬಿರುಸಿನ 140 ರನ್ಗಳ ಜೊತೆಯಾಟ ತಂದುಕೊಟ್ಟರು.

ಅಫ್ಘಾನ್ ಬೌಲರ್ಗಳನ್ನು ಸಿಕ್ಸರ್, ಬೌಂಡರಿಗಳಿಗೆ ಅಟ್ಟಿ ಮಿಂಚಿದರು.

ರೋಹಿತ್ ಶರ್ಮಾ 47 ಎಸೆತಗಳಲ್ಲಿ 8 ಫೋರ್ ಮತ್ತು 3 ಸಿಕ್ಸರ್ ನೆರವಿನಿಂದ 74 ರನ್ಗಳಿಸಿದರು.

ರಾಹುಲ್ 48 ಎಸೆತಗಳಲ್ಲಿ 6 ಫೋರ್ ಮತ್ತು 2 ಸಿಕ್ಸರ್ ಸಿಡಿಸಿ 69 ರನ್ಗಳಿಸಿದರು.

ಸ್ಲಾಗ್ ಓವರುಗಳಲ್ಲಿ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯಾ ಅಫ್ಘಾನ್ ಬೌಲರ್ಗಳ ಬೆಂಡೆತ್ತಿದರು.

ಪಾಂಡ್ಯಾ 13 ಎಸೆತಗಳಲ್ಲಿ ಅಜೇಯ 35 ರನ್ಗಳಿಸಿದರೆ, ರಿಷಬ್ 13 ಎಸೆತಗಳಲ್ಲಿ ಅಜೇಯ 27 ರನ್ಗಳಿಸಿದದರು.

Team India saakshatv

20 ಓವರುಗಳಲ್ಲಿ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 210 ರನ್ಗಳನ್ನು ಗಳಿಸಿತ್ತು.

ಬೃಹತ್ ಮೊತ್ತ ಬೆನ್ನಟ್ಟ ಹೊರಟ ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ.

ಮೊಹಮ್ಮದ್ ಶಮಿ ಮೊಹಮ್ಮದ್ ಶೆಹಜಾದ್ಗೆ ಖಾತೆ ತೆರೆಯಲು ಬಿಡಲಿಲ್ಲ.

ಬುಮ್ರಾ ಅಪಾಯಕಾರಿ ಹಝರತುಲ್ಲಾ ಜಜಾಯಿ ವಿಕೆಟ್ ಪಡೆದರು.

10 ಎಸೆತಗಳಲ್ಲಿ 19 ರನ್ ಸಿಡಿಸಿ ಟೀಮ್ ಇಂಡಿಯಾ ಬೌಲರ್ಗಳಿಗೆ ಹೆದರಿಕೆ ಹುಟ್ಟಿಸಿದ್ದ ರೆಹಮತುಲ್ಲಾ ಗುರ್ಬಾಜ್ ಜಡೇಜಾ ಎಸೆತದಲ್ಲಿ ಔಟಾದರು.

ಟಿ20 ವಿಶ್ವಕಪ್ನಲ್ಲಿ ಈ ಬಾರಿ ಮೊದಲ ಪಂದ್ಯ ಆಡಿದ ಅಶ್ವಿನ್ ಗುಲ್ಬದಿನ್ ನೈಬ್ ಮತ್ತು ನಜಿಬುಲ್ಲಾ ಜದ್ರಾನ್ ವಿಕೆಟ್ ಪಡೆದು ಅಫ್ಘಾನ್ ಚೇಸಿಂಗ್ಗೆ ಕಡಿವಾಣ ಹಾಕಿದರು.

ಸೋಲು ಖಾತ್ರಿಯಾದ ಮೇಲೆಅಫ್ಘಾನಿಸ್ತಾನ ತನ್ನ ರನ್ರೇಟ್ ಕಡೆಗೆ ಗಮನ ಇಟ್ಟು ಆಡಿತು.

ಮೊಹಮ್ಮದ್ ನಬಿ 32 ಎಸೆತಗಳಲ್ಲಿ 35 ರನ್ಗಳಿಸಿ ಔಟಾದರು. ಇವರ ಬೆನ್ನಲ್ಲೇ ರಶೀದ್ ಖಾನ್ ಕೂಡ ಔಟಾದರು.

ಕರೀಮ್ ಜನ್ನತ್ 22 ಎಸೆತಗಳಲ್ಲಿ ಅಜೇಯ 42 ರನ್ಗಳಿಸಿ ಅಫ್ಘಾನ್ ರನ್ರೇಟ್ ಕಡಿಮೆಯಾಗದಂತೆ ನೋಡಿಕೊಂಡರು.

20 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 144 ರನ್ಗಳಿಸಿದ ಅಫ್ಘಾನಿಸ್ತಾನ 66 ರನ್ಗಳಿಂದ ಪಂದ್ಯ ಸೋತಿತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd