Tamil Nadu | ಬದುಕಿದ್ದ ಪ್ರೇಯಸಿಯನ್ನ ಹೂತಿಟ್ಟ ಪ್ರಿಯತಮ
ಚೆನ್ನೈ : ಪ್ರೀತಿಸಿ.. ಹಿರಿಯರ ಮನವೊಲಿಸಿ ಮದುವೆಯಾಗಿ ನಾಲ್ಕು ವರ್ಷ ಕೂಡಿ ಬಾಳಿ ಕೊನೆಗೆ ಪ್ರಿಯತಮನೇ ಬದುಕಿದ್ದ ಪ್ರೇಯಸಿಯನ್ನಹೂತಿಟ್ಟ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ.
ನಾಲ್ಕು ವರ್ಷಗಳ ಹಿಂದೆ ಸುಪ್ರಜಾ ಮತ್ತು ವಿನಾಯಕ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಸುಪ್ರಜಾ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಈ ವೇಳೆ ವಿನಾಯಕ ಅಸ್ವಸ್ಥಗೊಂಡಿದ್ದ ಸುಪ್ರಜಾ ಅವರಿಗೆ ಕಿರುಕುಳ ನೀಡಿದ್ದಾನೆ. ಅಲ್ಲದೆ ಒಂದು ದಿನ ಪತ್ನಿ ಸುಪ್ರಜಾ ವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಇದರೊಂದಿಗೆ ಆಕೆ ಪ್ರಜ್ಞೆ ತಪ್ಪಿದಳು. ನಂತರ ವಿನಾಯಕ ತನ್ನ ಕಿರಿಯ ಸಹೋದರ ವಿಜಯ್ ಮತ್ತು ಸ್ನೇಹಿತ ಶಿವನ ಸಹಾಯದಿಂದ ಕಾಡಿನಲ್ಲಿ ಜೀವಂತವಾಗಿರುವಾಗಲೇ ತನ್ನ ಹೆಂಡತಿಯನ್ನು ಹೂತಿಟ್ಟಿದ್ದಾನೆ.
ಸುಪ್ರಜಾ ಕಾಣದ ಕಾರಣ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಅರಣ್ಯ ಪ್ರದೇಶದಲ್ಲಿ ಹೂತಿಟ್ಟಿದ್ದ ಸುಪ್ರಜಾ ಶವ ಪತ್ತೆಯಾಗಿದೆ. ಪತಿ ವಿನಾಯಕನೊಂದಿಗೆ ಇಬ್ಬರನ್ನು ಬಂಧಿಸಲಾಗಿದೆ. tamil-nadu husband-buried-sick-wife-arrested