ಟೀಮ್ ಇಂಡಿಯಾಕ್ಕೆ ಕಂಟಕವಾಯ್ತಾ ದುಡ್ಡಿನ ಆಸೆ..?

1 min read
Team India saakshatv

ಟೀಮ್ ಇಂಡಿಯಾಕ್ಕೆ ಕಂಟಕವಾಯ್ತಾ ದುಡ್ಡಿನ ಆಸೆ..? ಐಸಿಸಿ ಲೆಕ್ಕಾಚಾರವೇ ವಿರಾಟ್ ಬಳಗಕ್ಕೆ ಮುಳುವಾಯ್ತಾ..?

ವಿಶ್ವ ಕ್ರಿಕೆಟ್ನಲ್ಲಿ ಮನಿ ಮಷಿನ್ ಅಂದರೆ ಅದು ಟೀಮ್ ಇಂಡಿಯಾ. ದುಡ್ಡು ಮಾಡಬೇಕು ಅಂದರೂ ಟೀಮ್ ಇಂಡಿಯಾ ಬೇಕು..

ದುಡ್ಡು ತರಬೇಕು ಅಂದರೂ ಟೀಮ್ ಇಂಡಿಯಾದಿಂದ ಮಾತ್ರ ಸಾಧ್ಯ. ಐಸಿಸಿಗೂ ಈ ವಿಚಾರ ಮನದಟ್ಟಾಗಿದೆ.

ಹೀಗಾಗಿ ಐಸಿಸಿ ಕೂಡ ಟೀಮ್ ಇಂಡಿಯಾವನ್ನು ದುಡ್ಡಿನ ಥೈಲಿಯಾಗಿ ನೋಡಿ ಬಿಟ್ಟಿತಾ ಅನ್ನುವ ಚರ್ಚೆ ನಡೆಯುತ್ತಿದೆ.

ಟಿ20 ವಿಶ್ವಕಪ್ನಲ್ಲಿ ಐಸಿಸಿಯ ಶೆಡ್ಯೂಲ್ ಮತ್ತು ಟೀಮ್ ಇಂಡಿಯಾ ಆಡುವ ದಿನಾಂಕ, ಸ್ಥಳ ಮತ್ತು ಟೈಮಿಂಗ್ಸ್ ನೋಡಿದರೆ ಇದು ಸತ್ಯ ಎಂದೆನಿಸುತ್ತದೆ.

ಸನ್ಡೇ ಬ್ಲಾಕ್ಬಾಸ್ಟರ್ಗಾಗಿ ಟೀಮ್ ಇಂಡಿಯಾ ಬಲಿ..?

ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡಿದ್ದು ಅಕ್ಟೋಬರ್ 24ರ ಭಾನುವಾರದಂದು 2ನೇ ಪಂದ್ಯ ಆಡಿದ್ದು ಅಕ್ಟೋಬರ್ 31ರಂದು.

ಇವೆರಡು ಪಂದ್ಯಗಳ ನಡುವೆ ಇದ್ದ ಗ್ಯಾಪ್ ಬರೋಬ್ಬರಿ 7 ದಿನ. ಉಳಿದ ತಂಡಗಳು ಮೂರು ಮೂರು ಪಂದ್ಯಗಳನ್ನು ಆಡಿ ಮುಗಿಸಿದರೂ ಟೀಮ್ ಇಂಡಿಯಾದ ಮ್ಯಾಚ್ ಹತ್ತಿರಕ್ಕೂ ಬರಲಿಲ್ಲ.

ಈ ಗ್ಯಾಪ್ ಆಟಗಾರರ ಮೇಲೆ ಪರಿಣಾಮ ಬೀರಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ICC BCCI saaksha tv

ಟಿವಿ ಆಡಿಯನ್ಸ್ ಸೆಳೆಯಲು ರಾತ್ರಿ ಪಂದ್ಯ..!

ಟೀಮ್ ಇಂಡಿಯಾ ದಿನದ 2ನೇ ಪಂದ್ಯ ಆಡುವುದು ಮಾಮೂಲು ಆಗಿ ಬಿಟ್ಟಿದೆ. ಆದರೆ ಇದು ಟಿವಿ ಆಡಿಯನ್ಸ್ ಹಿಡಿದಿಟ್ಟುಕೊಳ್ಳಲು ಮಾಡಿರುವ ತಂತ್ರ ಅನ್ನುವುದು ಎಲ್ಲರಿಗೂ ಗೊತ್ತಿದೆ.

ಈ ಸ್ಟ್ರಾಟಜಿ ಟೀಮ್ ಇಂಡಿಯಾಕ್ಕೆ ಸರಿಯಾದ ಪೆಟ್ಟುಕೊಟ್ಟಿದೆ. ರಾತ್ರಿ ಪಂದ್ಯಗಳ ವೇಳೆ ಡ್ಯೂ ಫ್ಯಾಕ್ಟರ್ ಫಲಿತಾಂಶ ನಿರ್ಣಯಿಸುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಮೊದಲು ಬ್ಯಾಟಿಂಗ್ ಮಾಡಿದ ತಂಡ ಸುಲಭವಾಗಿ ಸೋಲುತ್ತಿದೆ. ಟಾಸ್ ಗೆದ್ದವರು ಮ್ಯಾಚ್ನಲ್ಲಿ ಬಾಸ್ ಆಗ್ತಿದ್ದಾರೆ. ಟೀಮ್ ಇಂಡಿಯಾ ಎರಡೂ ಪಂದ್ಯಗಳಲ್ಲಿ ಟಾಸ್ ಗೆದ್ದಿಲ್ಲ ಅನ್ನುವುದು ಕೂಡ ಗಮನಾರ್ಹ

ಟಫ್ ಕಾಂಪಿಟೇಷನ್ ಫಸ್ಟ್, ಲೂಸ್ ಮ್ಯಾಚ್ ನೆಕ್ಸ್ಟ್..!

ಟೀಮ್ ಇಂಡಿಯಾ ತನ್ನ ಮೊದಲೆರಡು ಪಂದ್ಯಗಳನ್ನು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮೇಲೆ ಆಡಿದೆ. ಗ್ರೂಪ್ ಹಂತದಲ್ಲಿ ಟೀಮ್ ಇಂಡಿಯಾಕ್ಕೆ ಟಫ್ ಪಂದ್ಯಗಳೇ ಇದಾಗಿತ್ತು.

ಇನ್ನುಳಿದ ಮೂರು ಪಂದ್ಯಗಳನ್ನು ಟೀಮ್ ಇಂಡಿಯಾ ಅಫ್ಘಾನಿಸ್ತಾನ, ನಮಿಬಿಯಾ ಮತ್ತು ಸ್ಕಾಟ್ಲೆಂಡ್ ಮೇಲೆ ಆಡಲಿದೆ.

ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ಟೀಮ್ ಇಂಡಿಯಾ ಈಗ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ.

ಐಸಿಸಿ ಟೀಮ್ ಇಂಡಿಯಾವನ್ನು ಎಲ್ಲಾ ರೀತಿಯಿಂದಲೂ ಬಳಸಿಕೊಳ್ಳುತ್ತಿದೆ.

ಟಾಸ್ ಒಂದನ್ನು ಗೆಲ್ಲಿಸಿಕೊಟ್ಟಿದ್ದರೆ ಟೀಮ್ ಇಂಡಿಯಾ ಪಂದ್ಯವನ್ನು ಕೂಡ ಗೆಲ್ತಾ ಇತ್ತು ಅನ್ನುವ ಟ್ರಾಲ್ ಶುರುವಾಗಿದೆ.

ಒಟ್ಟಿನಲ್ಲಿ ಐಸಿಸಿ ದುಡ್ಡಿನ ಥೈಲಿಗೆ ಕೈ ಹಾಕಿದ್ದು ಟೀಮ್ ಇಂಡಿಯಾಕ್ಕೆ ಹೊಡೆತ ನೀಡಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd