Team India : ಆರ್. ಅಶ್ವಿನ್ ಹೆಸರಲ್ಲಿ ಆಸೀಸ್ ವಿರುದ್ಧ ಹೆಚ್ಚು ವಿಕೆಟ್ ಪಡೆದ ರೆಕಾರ್ಡ್..!!
ಟೀಂ ಇಂಡಿಯಾದ ಸ್ಪಿನ್ ಅಸ್ತ್ರವಾಗಿರುವ ರವಿಚಂದ್ರನ್ ಅಶ್ವಿನ್(6/91) ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಟೆಸ್ಟ್ ವೃತ್ತಿ ಬದುಕಿನ ಮತ್ತೊಂದು ಅವಿಸ್ಮರಣೀಯ ಬೌಲಿಂಗ್ ದಾಳಿ ನಡೆಸಿದ್ದಾರೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ಅಶ್ವಿನ್, ಆಸೀಸ್‌ನ ಬ್ಯಾಟ್ಸ್‌ಮನ್‌ಗಳ ಎದುರು ಪ್ರಾಬಲ್ಯ ಮೆರೆದರು. ಆಸ್ಟ್ರೇಲಿಯಾದ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನಡುವೆಯೂ ಮಿಂಚಿದ ಅಶ್ವಿನ್ 6 ವಿಕೆಟ್ ಪಡೆದು ಮಿಂಚಿದರಲ್ಲದೆ, ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನ 32ನೇ ಬಾರಿ 5 ವಿಕೆಟ್ ಪಡೆದುಕೊಂಡರು.
ಈ ಪ್ರದರ್ಶನದೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಪಡೆದರು. ಭಾರತದ ಪರ ಈವರೆಗೂ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅನಿಲ್ ಕುಂಬ್ಳೆ(111) ವಿಕೆಟ್ ಪಡೆದಿದ್ದರೆ, ರವಿಚಂದ್ರನ್ ಅಶ್ವಿನ್(113*) ವಿಕೆಟ್ ಪಡೆದರು. ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಅತ್ಯಧಿಕ ವಿಕೆಟ್ ಪಡೆದ ಬೌಲರ್‌ಗಳ ಲಿಸ್ಟ್‌ನಲ್ಲಿ ಅಶ್ವಿನ್ ಅಗ್ರಸ್ಥಾನಕ್ಕೇರಿದರು.
ಇಂಗ್ಲೆಂಡ್ ತಂಡದ ಅನುಭವಿ ಹಾಗೂ ಪ್ರಮುಖ ವೇಗದ ಬೌಲರ್ ಜೇಮ್ಸ್ ಆಂಡರ್ಸನ್, ಆಸೀಸ್ ವಿರುದ್ಧ 112 ವಿಕೆಟ್‌ಗಳನ್ನ ಪಡೆದು ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದರು. ಆಸೀಸ್ ವಿರುದ್ಧದ ಪ್ರದರ್ಶನದ ಮೂಲಕ ರವಿಚಂದ್ರನ್ ಅಶ್ವಿನ್ 113 ವಿಕೆಟ್‌ಗಳನ್ನ ಪಡೆದು ಈ ಸಾಧನೆ ಹಿಂದಿಕ್ಕಿದರು.
Team India : R. Ashwin holds the record for most wickets against Aussies..!!