ಜಾಗತಿಕ ಸ್ಪರ್ಧೆಗೆ ತಂತ್ರಜ್ಞಾನ ಪ್ರಮುಖ ಸಲಕರಣೆ : ಪ್ರಧಾನಿ modi saaksha tv
ನವದೆಹಲಿ : ಜಾಗತಿಕ ಸ್ಪರ್ಧೆಗೆ ತಂತ್ರಜ್ಞಾನ ಪ್ರಮುಖ ಸಲಕರಣೆಯಾಗಿದೆ. ಇದು ಅಂತಾರಾಷ್ಟ್ರೀಯ ಭವಿಷ್ಯದ ಸ್ವರೂಪವನ್ನು ನಿರ್ಧರಿಸಲು ಸೂಕ್ತ ವಲಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಪ್ರಧಾನಿಗಳು ಇಂದು ಸಿಡ್ನಿ ಡೈಲಾಗ್ ಸಮಾವೇಶದಲ್ಲಿ ಭಾಷಣ ಮಾಡಿದರು. ಈ ವೇಳೆ ಡಿಜಿಟಲ್ ಯುಗದ ಅನುಕೂಲಗಳು ಮತ್ತು ಅನಾನುಕೂಲಗಳ ಕುರಿತು ಪ್ರಸ್ತಾಪಿಸಿದರು.
ಭಾರತ, ಪ್ರಜಾತಂತ್ರ ವ್ಯವಸ್ಥೆ ಮತ್ತು ಡಿಜಿಟಲ್ ವಲಯದಲ್ಲಿ ನಾಯಕನಾಗಿ ಹೊರಹೊಮ್ಮಿದ್ದು, ಭದ್ರತೆ ಮತ್ತು ಸಮೃದ್ಧತೆ ವಲಯದಲ್ಲಿ ಸಹಭಾಗಿತ್ವದಿಂದ ಕಾರ್ಯನಿರ್ವಹಿಸಲು ಸಿದ್ಧ ಎಂದ ಪ್ರಧಾನಿ, ದತ್ತಾಂಶ ರಕ್ಷಣೆ, ಕ್ರಿಪೆÇ್ಟೀ ಕರೆನ್ಸಿ ಮತ್ತಿತರ ವಲಯದಲ್ಲಿ ಸೂಕ್ತ ಭದ್ರತೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಇದೇ ವೇಳೆ ಭಾರತ, ಜಗತ್ತಿನಲ್ಲಿಯೇ ನವೋದ್ಯಮಗಳ ತ್ವರಿತ ಬೆಳವಣಿಗೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದ ಮೋದಿ, ಕೆಲವೇ ವಾರಗಳಲ್ಲಿ ಹೊಸ ಯೂನಿಕಾರ್ನ್ ಗಳು ಅಸ್ತಿತ್ವಕ್ಕೆ ಬರುತ್ತದೆ. ಆರೋಗ್ಯದಿಂದ ಶಿಕ್ಷಣ, ರಾಷ್ಟ್ರೀಯ ಭದ್ರತೆಯಂತಹ ಮಹತ್ವದ ವಿಷಯಗಳಲ್ಲಿಯೂ ಸೂಕ್ತ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದು ಹೇಳಿದರು.