ADVERTISEMENT
Friday, May 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ತೇಜೋ ತುಂಗಭದ್ರಾ ಕಾದಂಬರಿ ವಿಮರ್ಶೆ : ವಿಶ್ವಾಸ್ ಭಾರದ್ವಾಜ್

saaksha tv by saaksha tv
February 18, 2020
in Newsbeat
tunga
Share on FacebookShare on TwitterShare on WhatsappShare on Telegram

ಚರಿತ್ರೆಯನ್ನು ವಾಸ್ತವದಲ್ಲಿ ದಾಖಲೆಯಂತೆ ನೀಡದೆ ಪಾತ್ರಗಳ ಮೂಲಕ ಕಟ್ಟಿಕೊಡುವ ಕುಸುರಿ ಕೆಲಸ ಸವಾಲಿನದ್ದೂ ಹೌದು ಹಾಗೇ ಅತ್ಯಂತ ಸಂವೇದನಾತ್ಮಕ ಕ್ರಿಯಾಶೀಲ ಕೆಲಸವೆನ್ನುವುದು ಅಷ್ಟೇ ನಿಜ. ಪಾತ್ರಗಳ ಮುಖಾಂತರ ಚರಿತ್ರೆಯ ಆಯಾಮಗಳಿಗೆ, ಅದು ತೆರೆದುಕೊಳ್ಳುವ ಕಾಲಘಟ್ಟಗಳಿಗೆ, ತೆಗೆದುಕೊಳ್ಳುವ ತಿರುವುಗಳಿಗೆ, ಹೊರಳಿಸುವ ಮಗ್ಗುಲುಗಳಿಗೆ ಚ್ಯುತಿಯಾಗದಂತೆ ಪ್ರಸ್ತುತ ಪಡಿಸುವುದಿದೆಯಲ್ಲ, ಬರಹಗಾರನೊಬ್ಬನ ಮಟ್ಟಿಗೆ ಅದು ನಿಜವಾದ ದೀರ್ಘ ತಪಸ್ಸು. ಇಂತದ್ದೊಂದು ತಪಸ್ಸಾಚರಿಸಿ ತೇಜೋ ತುಂಗಭದ್ರ ಎನ್ನುವ ಮಹತ್ತರ ಕಾದಂಬರಿಯನ್ನು ಕನ್ನಡಿಗರಿಗೆ ಕೊಟ್ಟ ಹೆಗ್ಗಳಿಗೆ ನನ್ನ ಪ್ರೀತಿಯ ಬರಹಗಾರ ವಸುದೇಂದ್ರರದ್ದು. ನನ್ನ ಇನ್ನೊಬ್ಬ ಮೆಚ್ಚಿನ ಕಾದಂಬರಿಕಾರ ಡಾ. ಕೆ.ಎನ್ ಗಣೇಶಯ್ಯ ಹೇಳಿರುವಂತೆ ಕನ್ನಡ ಸಾಹಿತ್ಯದ ಮಟ್ಟಿಗೆ ಇದೊಂದು ಮೈಲಿಗಲ್ಲು ಎನ್ನುವುದು ಶತಪ್ರತಿಶತ ನಿಜ.

vishwasಪೋರ್ಚೀಗೀಸರ ಲಿಸ್ಬನ್ ನಗರದ ತೇಜೋ ನದಿ ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ತುಂಗಭದ್ರಾ ನದಿಯನ್ನು ಸೇರುವುದು ಈ ಕಾದಂಬರಿಯ ಒನ್ ಲೈನ್ ಸ್ಟೋರಿ. ಅದೆಲ್ಲೋ 24 ಸಾವಿರ ಮೈಲುಗಳಾಚೆಗಿನ, ಸಾಗರದಲ್ಲಿ ಗಾವುದ ಯೋಜನ ದೂರ ಹಾದು ಸೇರಬೇಕಾದ ತೇಜೋ ನದಿ ಅದು ಹೇಗೆ ತುಂಗಭದ್ರಾ ಸೇರುತ್ತದೆ ಎನ್ನುತ್ತೀರಾದರೆ ನೀವು ಕಾದಂಬರಿಯನ್ನು ಓದಬೇಕು. ಎರಡು ವಿಭಿನ್ನ ನಾಗರೀಕತೆಗಳ ಧರ್ಮ-ಕರ್ಮ ಸಂಸ್ಕೃತಿ-ಜೀವನಶೈಲಿ, ದೇಶಾಚಾರ-ಕರ್ಮಟತನಗಳೆಲ್ಲವೂ ಕಾದಂಬರಿಯಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿದೆ ನಿಜಾರ್ಥದಲ್ಲಿ ಬೆತ್ತಲಾಗಿದೆ. ತೇಜೋ ತುಂಗಭದ್ರ ಎನ್ನುವ 1492ರಿಂದ 1518ರ ನಡುವಿನ 26 ವರ್ಷಗಳ ನಡುವಾದ ಕಥೆಯನ್ನು ಒಂದು 15 ಸೆಂಟೀಮೀಟರ್ ಅಳತೆಮಾಪನದಲ್ಲಿ ತೋರಿಸುವುದಾದರೆ, ಮೊದಲ 5 ಸೆಂಟೀ ಮೀಟರ್ ತನಕ ತೇಜೋ ನದಿಯಿಂದಲೇ ಆರಂಭವಾಗುತ್ತದೆ. ಲಿಸ್ಬೆನ್ ನಗರ, ಮಸಾಲೆ ದಾಸ್ತಾನು, ಮ್ಯಾನ್ಯುಯೆಲ್ ಮಹಾಪ್ರಭುಗಳ ಆಡಳಿತ, ಕ್ರೈಸ್ತರು, ಯಹೂದಿಗಳ ಮೇಲಿನ ಅಸಹಿಷ್ಟುತೆ, ಯಹೂದಿಗಳ ವ್ಯಾಪಾರಿ ನೀತಿ, ಎರಡು ಯುವ ಜೀವಿಗಳ ನವಿರಾದ ಸ್ನೇಹ-ಪ್ರೀತಿ ಇತ್ಯಾದಿ ಇತ್ಯಾದಿ. ಇಲ್ಲಿ ಗೇಬ್ರಿಯಲ್, ಬೆಲ್ಲಾ, ಬೆನ್ಯುಲ್, ಆಂಟೋನಿಯೋ ಕಥೆ ಹೇಳಲು ಶುರು ಮಾಡುತ್ತಾರೆ. ಇತ್ತ ನಂತರದ ಕಥೆಯನ್ನು ಹಿಮ್ಮುಖವಾಗಿ ಆರಂಭಿಸುತ್ತಾರೆ ವಿಜಯನಗರದ ಪ್ರಜೆಗಳಾದ ಹಂಪಮ್ಮ, ಚಂಪಕ್ಕ, ಗುಣಸುಂದರಿ, ಅಂಣಂಭಟ್ಟರು, ಅಡವಿ ಸ್ವಾಮಿ, ಮಾಪಳನಾಯಕ, ತೆಂಬಕ್ಕೆ, ಕೇಶವ, ಈಶ್ವರಿ. ನಿಮಗೆ ಈ ಹೊತ್ತಿನಲ್ಲಿ ಅಮ್ಮದಕಣ್ಣ ಯಾರು ಎಂದು ತಿಳಿಯುವುದಿಲ್ಲ. ಅಳತೆಗೋಲಿನಲ್ಲಿ 5 ಸೆಂಟೀಮೀಟರ್ ನಂತರ ತುಂಗಭದ್ರದ ಕಥೆ ಶುರುವಾದರೂ ಅದು ಕೊನೆಯಿಂದ ಪ್ರಾರಂಭವಾಗುವಂತೆ ಭಾಸವಾಗುತ್ತದೆ. ಕನ್ನಡದ ಮಟ್ಟಿಗೆ ಈ ಶೈಲಿ ಅತ್ಯಂತ ಹೊಸತು.

Related posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

May 14, 2026
NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

May 14, 2026

ತೇಜೋ-ತುಂಗಭದ್ರಾದಲ್ಲಿ ಅತ್ಯಂತ ಕಾಡುವುದು ಧರ್ಮವೆನ್ನುವ ಬೊಗಳೆ ಕಂದಾಚಾರದಿಂದ ಆಗುವ ಅನಾಹುತಗಳು. ಮಾನವೀಯೆತೆಯನ್ನೇ ಮೆಟ್ಟಿ ನಿಲ್ಲುವ ಧರ್ಮದ ಕುರುಡು ನರ್ತನ ಓದುಗರನ್ನು ನಡುನಡುವೆ ಆರ್ದ್ರರನ್ನಾಗಿಸುತ್ತದೆ. ಎಷ್ಟೋ ನೂರು ವರ್ಷಗಳ ಹಿಂದೆ ದಯಾಮಯ ಏಸು ಕ್ರಿಸ್ತನನ್ನು ಯಹೂದಿಗಳ ಯಾರೋ ಶಿಲುಭೆಗೇರಿಸಿದ್ದ ಎಂದು ವರ್ತಮಾನದಲ್ಲಿ ಯಹೂದಿಗಳನ್ನು ಕಂಡಲ್ಲಿ ಕೊಲ್ಲುವ ಚರ್ಚ್ ಹಾಗೂ ಪೋಪ್ ಎನ್ನುವ ಧಾರ್ಮಿಕ ವ್ಯವಸ್ಥೆ. ಯಹೂದಿಗಳ ವ್ಯಾಪಾರಿ ವರ್ತನೆ, ಆರ್ಥಿಕ ಅಹಂಕಾರ, ನೆಲೆಯಿಲ್ಲದ ಪರದಾಟ, ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿಯುವ ವಾಸ್ಕೋಡಗಾಮಾ, ಭಾರತದಿಂದ ಮಸಾಲೆ ಪದಾರ್ಥ ಬಂದ ನಂತರ ಸಿರಿವಂತಿಕೆಯ ಹಮ್ಮಿನಲ್ಲಿ ರಾಕ್ಷಸನ ಮೆರೆಯುವ ಪೋರ್ಚುಗಲ್ಲರ ದಾರ್ಷ್ಟ್ಯ ಕಾದಂಬರಿಯ ಮಹತ್ವದ ಘಟ್ಟ.

ನಾವು ಇತಿಹಾಸದಲ್ಲಿ ಓದಿಕೊಂಡಿದ್ದು ವಾಸ್ಕೋಡಗಾಮ ಭಾರತಕ್ಕೆ ವಲಸೆ ಮಾರ್ಗ ಕಂಡುಹಿಡಿದ, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನಿಗೆ ಪರ್ಷಿಯನ್ ಕುದುರೆಗಳನ್ನು ಆಲ್ಬುಕರ್ಕ ತಂದೊದಗಿಸಿದ ಎನ್ನುವುದಷ್ಟೆ. ಇದರ ಹಿನ್ನೆಲೆ ಮುನ್ನೆಲೆಯಲ್ಲಿ ಇದೇ ಗಾಮ ಸಾಹೇಬ, ಇದೇ ಆಲ್ಬುಕರ್ಕನ ಪೈಶಾಚಿಕ ಮುಖಗಳನ್ನು ಪರಿಚಯಿಸುತ್ತದೆ ಈ ಕಾದಂಬರಿ. ಈ ಪೋರ್ಚುಗಲ್ ದೊರೆಗಳ ಮುಸ್ಲೀಂ, ಯಹೂದಿ ದ್ವೇಷ, ಮತಾಂತರ, ಹೋದಲೆಲ್ಲಾ ತಮ್ಮ ವಸಾಹತು ಧ್ವಜ ನೆಡುವ ಸಾಮ್ರಾಜ್ಯ ಶಾಹಿ ನೀತಿಗಳು ಅತ್ಯಂತ ಸಾದ್ಯಾಂತವಾಗಿ ಕಾದಂಬರಿಯಲ್ಲಿ ನಿರೂಪಿಸಲ್ಪಟ್ಟಿವೆ.

ಕಾದಂಬರಿಯ ದುರಂತ ನಾಯಕ ಗೇಬ್ರಿಯಲ್ ಹುಟ್ಟಿನಿಂದ ಕ್ರೈಸ್ತ, ಪ್ರೀತಿಸುವುದು ಯಹೂದಿ ಬೆಲ್ಲಾಳನ್ನು, ಅವಳಪ್ಪನ ಹಣದ ಅಹಂಕಾರಕ್ಕೆ ಪ್ರತಿಯಾಗಿ ಸಿರಿವಂತನಾಗಿ ಬೆಲ್ಲಾಳನ್ನು ವರಿಸಲು ಹೊರಡುವುದು ಭಾರತಕ್ಕೆ; ತಲುಪುವುದು ಗೋವಾ. ಈ ನಡುವಿನ ನಾವಿಕ ಜೀವನದ ಕಷ್ಟ ನಷ್ಟಗಳು, ಗೋವಾದಲ್ಲಿ ಬದುಕಿಗಾಗಿ ಸುಲ್ತಾನ್ ನ ಮೊರೆ ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಅಹಮದ್ ಖಾನ್ ಆಗುವುದು. ಆದರೆ ಮತ್ತೆ ತನ್ನದೇ ಪೋರ್ಚುಗಲ್ ದೊರೆ ಆಲ್ಬುಕರ್ಕನ ಕ್ರೌರ್ಯಕ್ಕೆ ತುತ್ತಾಗಿ ಕಿವಿ ಮತ್ತು ಮೂಗು ಕುಯ್ಯಿಸಿಕೊಂಡು ಕುರೂಪಿಯಾಗುವುದು ಇವೆಲ್ಲವೂ ಚಾರಿತ್ರಿಕ ದುರಂತವೊಂದಕ್ಕೆ ಹಿಡಿದ ಕೈಗನ್ನಡಿಯಂತೆ ಭಾಸವಾಗುತ್ತದೆ. ಕೊನೆಗೆ ಈ ಗೇಬ್ರಿಯಲ್ ತನಗೆ ನೆರವಾಗುವ ವಿಜಯನಗರ ಸಂಸ್ಥಾನಕ್ಕೆ ನಿಷ್ಟನಾಗಿ ತೆಂಬಕಪುರದಲ್ಲಿ ತುಂಗಭದ್ರಾ ನದಿಯಲ್ಲಿ ಮೀನು ಹಿಡಿದು ಮತ್ತೆ ನದಿಗೆ ಬಿಡುವ ವಿಚಿತ್ರ ಮನಸ್ಥಿತಿಯ ಒಬ್ಬಂಟಿಗ ಅಮ್ಮದಕಣ್ಣನಾಗುತ್ತಾನೆ.
ವಿದೇಶಿ ಪೋರ್ಚುಗಲ್ ಮಗು ಹೇಗೆ ಪಂಪಾಪತಿಯಾಗುತ್ತದೆ? ಪಂಪಾಪತಿಯ ತಾಯಿ ಅಗ್ವೇದಳಿಗೂ ಗೇಬ್ರಿಯಲ್ ಗೂ ನಡುವಿನ ಸಂಬಂಧವೇನು? ತೇಜೋ ಮತ್ತು ತುಂಗಭದ್ರಾ ನಡುವಿನ ಕೊಂಡಿಯಾಗಿ ಅಗ್ವೇದ ಹೇಗೆ ಕಾರಣ? ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ಎಂದು ಹಾಡುವ ಪುರಂದರ ದಾಸರು! ಹಿಂದೂ ಹಂಪಮ್ಮ ಅಮ್ಮದಕಣ್ಣನ ಜೊತೆಯಾಗುವ ಪ್ರಸಂಗ! ಇವನ್ನೆಲ್ಲಾ ನೀವು ಓದಲೇಬೇಕಿದ್ದರೆ ಈ ಕೂಡಲೆ ಕಾದಂಬರಿ ಎತ್ತಿಕೊಳ್ಳಿ.

ಇದು ವಸುದೇಂದ್ರರ ಈವರೆಗಿನ ಎಲ್ಲಾ ಕೃತಿಗಳ ಪೈಕಿ ದಿ ಮಾಸ್ಟರ್ ಪೀಸ್. ಈ ಶೈಲಿಯ ಕಾದಂಬರಿಯನ್ನು ಕನ್ನಡ ಕಂಡಿದ್ದು ಎಸ್.ಎಲ್ ಭೈರಪ್ಪನವರಿಂದ. ಕಾದಂಬರಿ ಬರೆಯುವ ಮೊದಲಿನ ತಯಾರಿ ಹಾಗೂ ಹೋಂ ವರ್ಕ್ ಸಹ ಭೈರಪ್ಪನವರಂತೆಯೇ ಇದೆ. ಹಿಂದೊಮ್ಮೆ ಗಣೇಶಯ್ಯ ಮಾತಾಡುವ ಮಧ್ಯೆ ಹೇಳಿದ್ದರು, ಪೋರ್ಚುಗಲ್ ಗೆ ಭಾರತದಿಂದ ಹೊರಡುವ ಹಡಗಿನಲ್ಲಿ ಪ್ರಾಯಣಿಸುವ ಪ್ರಯಾಣಿಕರ ಮೇಲಂಗಿಗೆ ಜೇಬು ಇರುತ್ತಿರಲಿಲ್ಲ; ಕತ್ತರಿಸಲಾಗುತ್ತಿತ್ತು. ಯಾಕೆಂದರೆ ಇಲ್ಲಿಂದ ಒಂದೇ ಒಂದು ಮುಷ್ಟಿ ಕಾಳು ಮೆನಸು ಕದ್ದೊಯ್ದರು ಪೋರ್ಚುಗಲ್ ನಲ್ಲಿ ಅವನು ಒಂದೆಕೆರೆ ಜಮೀನು ಖರೀದಿಸಬಹುದಿತ್ತು ಎಂದು. ಅವರ ಮಾತನ್ನು ಇನ್ನಷ್ಟು ಅರ್ಥ ಮಾಡಿಸಿದ್ದು ತೇಜೋ ತುಂಗಭದ್ರಾ ಕಾದಂಬರಿ.

ನಾನು ಸಾಮಾನ್ಯವಾಗಿ ಪುಸ್ತಕವೊಂದರ ಬಗ್ಗೆ ಬರೆಯುವುದು ಕಡಿಮೆ. ಅದು ತೀರಾ ಕಾಡದ ಹೊರೆತು ಏನನ್ನೂ ಗೀಚಲಾರೆ. ಮೊದಲ ಮುದ್ರಣಕ್ಕೆ ಮೊದಲೇ ಪ್ರತಿಗಳು ಖಾಲಿಯಾದ ದಾಖಲೆ ಹೊಂದಿದ ತೇಜೋ ತುಂಗಭದ್ರಾವನ್ನು ಹಿಡಿದಿದ್ದೂ ತಡವಾಗಿ, ಮುಗಿಸಿದ್ದು ತಡವಾಗಿ ಕೊನೆಗೆ ಹೀಗೊಂದು ಮನಸಿಗೆ ತೋಚಿದ ಅಭಿಪ್ರಾಯ ಗೀಚುತ್ತಿರುವುದೂ ತಡವಾಗಿಯೇ. ಓದು ಮುಗಿಸಿ ವಾರವೆ ಆಗಿದ್ದರು ಕೊಂಚ ಕಾದಂಬರಿಯ ಹ್ಯಾಂಗ್ ಒವರ್ ಕೊಂಚ ಸೋಮಾರಿತನದ ಕಾರಣ ಇದಿಷ್ಟು ಬರೆಯಲು ತಡವಾಯಿತು. ಹೀಗಾಗಿ ವಸುದೇಂದ್ರರಲ್ಲಿ ಕ್ಷಮೆಯಾಚಿಸುತ್ತಾ,,

-ವಿಶ್ವಾಸ್ ಭಾರದ್ವಾಜ್ (ವಿಭಾ)

Tags: NovelTejo Tungabhadravishwas bharadwaj
ShareTweetSendShare
Join us on:

Related Posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

by Shwetha
May 14, 2026
0

ಬೆಂಗಳೂರು: ದೇಶದ ಆರ್ಥಿಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನತೆಗೆ ಕರೆ ನೀಡಿದ್ದರು. ಪ್ರಧಾನಿಯವರ...

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

by Shwetha
May 14, 2026
0

ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಪ್ರಶ್ನೆಯಾದ ಹಿನ್ನೆಲೆಯಲ್ಲಿ ಪರೀಕ್ಷೆ...

ಕೇಳದಿದ್ದರೆ ತಾಯಿ ಕೂಡ ಊಟ ನೀಡಲ್ಲ ಎಂದು ಮಂತ್ರಿಗಿರಿಗೆ ಪಟ್ಟು : ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೆಟ್ಟಿಲೇರಲು ಸಜ್ಜಾದ ಪ್ರದೀಪ್ ಈಶ್ವರ್

ಕೇಳದಿದ್ದರೆ ತಾಯಿ ಕೂಡ ಊಟ ನೀಡಲ್ಲ ಎಂದು ಮಂತ್ರಿಗಿರಿಗೆ ಪಟ್ಟು : ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೆಟ್ಟಿಲೇರಲು ಸಜ್ಜಾದ ಪ್ರದೀಪ್ ಈಶ್ವರ್

by Shwetha
May 14, 2026
0

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಇಂದು ವಿಧಾನಸೌಧದಲ್ಲಿ ತಮ್ಮ ರಾಜಕೀಯ ಆಕಾಂಕ್ಷೆ ಮತ್ತು ಶೈಕ್ಷಣಿಕ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಅತ್ಯಂತ ಪ್ರಭಾವಶಾಲಿ ಮಾತುಗಳನ್ನಾಡಿದ್ದಾರೆ. ಅವರ ಮಾತುಗಳು...

ಬೆಳಗಾವಿ ಪಾಲಿಕೆಯಲ್ಲಿ ಗಡಿ ಕಾವು..! ಕನ್ನಡ–MES ಸದಸ್ಯರ ನಡುವೆ ಭಾರೀ ವಾಗ್ವಾದ

ಬೆಳಗಾವಿ ಪಾಲಿಕೆಯಲ್ಲಿ ಗಡಿ ಕಾವು..! ಕನ್ನಡ–MES ಸದಸ್ಯರ ನಡುವೆ ಭಾರೀ ವಾಗ್ವಾದ

by Shwetha
May 14, 2026
0

ಬೆಳಗಾವಿ ಮಹಾನಗರ ಪಾಲಿಕೆ ಸಭೆ ಮತ್ತೆ ಗಡಿ ವಿವಾದದ ಕಾವು ಪಡೆದುಕೊಂಡಿತು. ಕನ್ನಡ ಪರ ಸದಸ್ಯರು ಮತ್ತು MES ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ವಾತಾವರಣ...

ಕಾಂಗ್ರೆಸ್‌ನ 6ನೇ ಗ್ಯಾರಂಟಿ ಘೋಷಣೆ..! ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ಆರಂಭ

ಕಾಂಗ್ರೆಸ್‌ನ 6ನೇ ಗ್ಯಾರಂಟಿ ಘೋಷಣೆ..! ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ಆರಂಭ

by Shwetha
May 14, 2026
0

ಕರ್ನಾಟಕ ರಾಜಕೀಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಗಮನ ಸೆಳೆದಿರುವ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಸರ್ಕಾರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram