Telangana : ಜಿಮ್ ಮಾಡುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವು….
ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ತೆಲಂಗಾಣದ ಸಿಕಂದರಾಬಾದ್ನ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ 24 ವರ್ಷದ ಯುವಕ ಗುರುವಾರ ಸಂಜೆ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ವ್ಯಾಯಾಮ ಮಾಡುತ್ತಿದ್ದಾಗ ಏಕಾಏಕಿ ಉಸಿರು ಬಿಗಿ ಹಿಡಿದು ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ಇಡೀ ಘಟನೆ ಜಿಮ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೃತನನ್ನು ವಿಶಾಲ್ ಎಂದು ಗುರುತಿಸಲಾಗಿದ್ದು, ಮೊಂಡಾ ಮಾರುಕಟ್ಟೆ ಪ್ರದೇಶದ ಘಾನ್ಸಿ ಬಜಾರ್ ನಿವಾಸಿಯಾಗಿದ್ದಾರೆ. 2020 ರ ಬ್ಯಾಚ್ನಲ್ಲಿ ಕಾನ್ಸ್ಟೆಬಲ್ ಕೆಲಸಕ್ಕೆ ಆಯ್ಕೆಯಾಗಿದ್ದ ವ್ಯಕ್ತಿ ಆಸಿಫ್ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪೊಲೀಸರ ಪ್ರಕಾರ, ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ, ಸಿಕಂದರಾಬಾದ್ನ ಮರ್ರೆಡ್ಪಲ್ಲಿಯಲ್ಲಿರುವ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಹೃದಯ ಸ್ತಂಭನದಿಂದ ವಿಶಾಲ್ ಸಾವನ್ನಪ್ಪಿದ್ದಾರೆ.
Telangana : A man who was doing gym suddenly collapsed and died….