ಟಾಲಿವುಡ್ ನ ಖ್ಯಾತ ನಟರಾಗಿದ್ದ ರಾವಿ ಕೊಂಡಲ ರಾವು ಅವರು ವಿಧಿವಶರಾಗಿದ್ದಾರೆ. ನಟರಷ್ಟೇ ಅಲ್ಲದೇ RSS ಸದಸ್ಯ, ಲೇಖಕ, ಹಿರಿಯ ಪತ್ರಕರ್ತರಾಗಿದ್ದ 88 ವರ್ಷದ ರಾವಿ ಕೊಂಡಲ ರಾವು ಅವರು ಹೃಧಯಾಘಾತದಿಂದ ನಿಧನವಾಗಿದ್ದಾರೆ. ಹೈದರಾಬಾದ್ನ ಸೋಮಾಜಿಗುಡದ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರಾವು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಕೊಂಡಲ ರಾವು ಅವರ ಪುತ್ರಿ ರಾಧಾ ಕುಮಾರಿ ಸಹ ಖ್ಯಾತ ನಟಿಯಾಗಿದ್ದಾರೆ. ಅಷ್ಟೇ ಅಲ್ದೇ ಹಲವಾರು ಸಿನಿಮಾಗಳಿಗೆ ಕತೆಗಾರರಾಗಿ, ಸಂಭಾಷಣೆಕಾರರಾಗಿ, ಸಹ ನಿರ್ಮಾಪಕ, ಸಹ ನಿರ್ದೇಶಕರಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ. ತೆಲುಗಿನ ‘ವಿಜಯ ಚಿತ್ರಂ ‘ ಸಿನಿಮಾ ಪತ್ರಿಕೆಯ ಪ್ರಧಾನ ಸಂಪಾದರಾಗಿ ಸಹ ಕೆಲಸ ನಿರ್ವಹಿಸಿದ್ದರು. ರಾವಿ ಕೊಂಡಲ ರಾವು ಅವರ ನಿಧನಕ್ಕೆ ಚಿರಂಜೀವಿ, ನಾಗಾರ್ಜುನ , ಬಾಲಕೃಷ್ಣ ಸೇರಿದಂತೆ ತೆಲುಗು ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್‌ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ ’99 ಸ್ಟೋರ್’!
49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್‌ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ '99 ಸ್ಟೋರ್'! ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಊಟ ಆರ್ಡರ್...








