ರಾಷ್ಟ್ರೀಯ ಹೆದ್ದಾರಿ ಹಿಸಾರ್-ಚಂಡೀಗಢ ಮಾರ್ಗ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 8 ಜನ ಸಾವನ್ನಪ್ಪಿ, 8 ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಗೋಗಾ ಮೇಡಿಧಾಮಕ್ಕೆ ಹೋಗುತ್ತಿದ್ದ ಭಕ್ತರಿದ್ದ ಪಿಕಪ್ ವ್ಯಾನ್ ಗೆ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ 8 ಜನ ಸಾವನ್ನಪ್ಪಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.