Terrorists killed : ಭದ್ರತಾ ಪಡೆಗಳ ಎನ್ಕೌಂಟರ್ ಗೆ 4 ಉಗ್ರರು ಮಟಾಶ್….
ಬುಧವಾರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಿದ್ರಾ ಬೈಪಾಸ್ ಪ್ರದೇಶದ ತಾವಿ ಸೇತುವೆಯ ಬಳಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ.
ಭಯೋತ್ಪಾದಕರು ಟ್ರಕ್‌ನಲ್ಲಿ ಕಾಶ್ಮೀರದತ್ತ ತೆರಳುತ್ತಿದ್ದಾಗ ಭದ್ರತಾ ಪಡೆಗಳು ಸಿದ್ರಾ ಚೆಕ್‌ಪಾಯಿಂಟ್ ಬಳಿ ವಾಹನವನ್ನು ಹಿಂಬಾಲಿಸಿ ತಡೆದಿವೆ. ಪೊಲೀಸರು ಟ್ರಕ್ ಸರ್ಚ್ ಪ್ರಾರಂಭಿಸಿದಾಗ ಭಯೋತ್ಪಾದಕರು ಟ್ರಕ್ ಒಳಗಿನಿಂದ ಗುಂಡಿನ ದಾಳಿ ನಡೆಸಿದ್ದಾರೆ.
ಎನ್‌ಕೌಂಟರ್ ನಡೆಯಿತು, ಈ ಸಮಯದಲ್ಲಿ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿತು ಮತ್ತು ಭಯೋತ್ಪಾದಕರು ಕೊಲ್ಲಲ್ಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರು ಎಲ್ಲಿಂದ ನುಸುಳಿದ್ದಾರೆ ಎಂಬುದಕ್ಕೆ ತನಿಖೆ ಮುಂದುವರಿದಿದೆ. ಟ್ರಕ್ ಅನ್ನು ಶೋಧಿಸಿದ ನಂತರ ಸ್ಪಷ್ಟ ಚಿತ್ರಣ ಹೊರಬರುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪರಾರಿಯಾಗಿರುವ ಟ್ರಕ್ ಚಾಲಕನನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ.
Terrorists killed : 4 terrorists killed in encounter with security forces in J&K’s Sidhra