75 ವರ್ಷದ ಕಾಂಗ್ರೆಸ್ ಆಡಳಿತ ಸಮುದ್ರದ ಉಪ್ಪು ನೀರಿನಂತೆ : ಬಿಎಸ್ ವೈ Congress saaksha tv
ಚಿಕ್ಕೋಡಿ : ಕಾಂಗ್ರೆಸ್ ಪಕ್ಷ ಸಾಗರದಷ್ಟು ಬೆಳೆದಿದ್ದರೂ ಅದು ಯಾರ ಬಾಯಿಗೂ ನೀರಾಗದು.
75 ವರ್ಷದ ಕಾಂಗ್ರೆಸ್ ಆಡಳಿತ ಸಮುದ್ರದ ಉಪ್ಪು ನೀರಿನಂತೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಚಿಕ್ಕೋಡಿಯಲ್ಲಿ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದವರು ಹಣ, ಹೆಂಡ ಹಂಚಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದರು. ಆದ್ರೆ ಇದೀಗ ಅಂಥವುದಕ್ಕೆಲ್ಲ ನರೇಂದ್ರ ಮೋದಿ ಕಡಿವಾಣ ಹಾಕಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಜನಪರ ಆಡಳಿತ ನೀಡಿದೆ ಎಂದರು.
ವಜ್ರಗಳ ರಾಶಿಯೇ ತುಂಬಿಹುದು ನಿನ್ನಲ್ಲಿ ಏನಾದರೇನು, ಬಾಯಾರಿದವನಿಗೆ ನೀರಾದೆಯಾ? ಎಂದು ಕವನ ಹೇಳುವ ಮೂಲಕ ಕಾಂಗ್ರೆಸ್‍ಗೆ ಟಾಂಗ್ ನೀಡಿದ ಬಿಎಸ್ ವೈ, ಸಾಗರದಷ್ಟು ಕಾಂಗ್ರೆಸ್ ಬೆಳೆದಿದ್ದರೂ ಸಹ ಅದು ಯಾರ ಬಾಯಿಗೂ ಸಹ ನೀರಾಗದು. 75 ವರ್ಷದ ಕಾಂಗ್ರೆಸ್ ಆಡಳಿತ ಸಮುದ್ರದ ಉಪ್ಪು ನೀರಿನಂತಾಗಿದೆ ಎಂದರು.