Anjanadri: ಅಂಜನಾದ್ರಿಯ ಆಂಜನೇಯನ ದರ್ಶನ ಪಡೆದ ಇಂಗ್ಲೆಂಡ್ ರಾಯಭಾರಿ 

1 min read
Gangavathi Saaksha Tv

ಅಂಜನಾದ್ರಿಯ ಆಂಜನೇಯನ ದರ್ಶನ ಪಡೆದ ಇಂಗ್ಲೆಂಡ್ ರಾಯಭಾರಿ

ಗಂಗಾವತಿ: ಕರ್ನಾಟಕದ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿಯ ಆಂಜನೇಯ ದೇಗುಲಕ್ಕೆ ಇಂಗ್ಲೆಂಡ್ ರಾಯಭಾರಿ ತಮ್ಮ ಪತ್ನಿ ಸಮೇತ ಭೇಟಿ ನೀಡಿ ದರ್ಶನ ಪಡೆದಿದ್ದಾರೆ

ಬ್ರಿಟಿಷ್ ಸರ್ಕಾರದ ಡೆಪ್ಯುಟಿ ಕಮೀಷನರ್ ಅಲೆನ್ ಗಿಮೆಲ್ ಹಾಗೂ ಅವರ ಪತ್ನಿಯವರನ್ನು ಹರಿ ಎಂಬುವವರು ಅಂಜನಾದ್ರಿಯ ಆಂಜನೇಯ ದೇಗುಲಕ್ಕೆ ಕರೆತಂದು ದರ್ಶನ ಮಾಡಿಸಿದ್ದಾರೆ.

ಇದಕ್ಕೂ ಮುನ್ನ ಹುಬ್ಬಳ್ಳಿ ಸಮೀಪ ಇರುವ ಗರಗದ ರಾಷ್ಟ್ರ ಧ್ವಜ ತಯಾರಿಸುವ ಘಟಕಕ್ಕೆ ರಾಯಭಾರಿ ಭೇಟಿ ನೀಡಿದ್ದರು. ಹೊಸಪೇಟೆ ಮತ್ತು ಜಿಂದಾಲ್ ನಲ್ಲಿರುವ ಮಹಿಳಾ ಸ್ವಸಹಾಯ ಸಂಘ ಮತ್ತು ಸಹಕಾರ ಸಂಘಗಳ ಕಾರ್ಯಚಟುವಟಿಕೆಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಬಂದಿರುವುದಾಗಿ ಹೇಳಿದ್ದಾರೆ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd