ರಾಜಿಗೆ ಕರೆದು ಠಾಣೆ ಮುಂದೆ ಯುವಕನ ಮೇಲೆ ಹಲ್ಲೆ mandya saaksha tv
ಮಂಡ್ಯ : ರಾಜಿಗೆ ಎಂದು ಕರೆದು ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಬೀರೇಗೌಡನಹಳ್ಳಿಯ ಅಮಿತ್(24) ಹಾಗೂ ಯತ್ತಗದಹಳ್ಳಿ ಭೂಮಿಕ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಇವರ ಪ್ರೇಮ ವಿವಾಹಕ್ಕೆ ಮನೆಯವರು ಒಪ್ಪದ ಕಾರಣ ಕಳೆದ ನಾಲ್ಕು ದಿನಗಳ ಹಿಂದೆ ಇಬ್ಬರು ಮನೆ ಬಿಟ್ಟು ಓಡಿಹೋಗಿ ದೇವಾತವೊಂದರಲ್ಲಿ ಮದುವೆಯಾಗಿದ್ದರು.
ಇತ್ತ ಹುಡುಗಿಯ ಮನೆಯಲ್ಲಿ ಯುವತಿ ನಾಪತ್ತೆ ದೂರು ದಾಖಲಾಗಿತ್ತು. ಓಡಿಹೋಗಿದ್ದ ಜೋಡಿಯನ್ನು ಪತ್ತೆ ಹಚ್ಚಿದ ಪೊಲೀಸರು ಇಂದು ಠಾಣೆಗೆ ಬಂದು ಮುಚ್ಚಿಳಿಕೆ ಬರೆದುಕೊಟ್ಟು ಯುವತಿ ಕುಟುಂಬದ ರಾಜೀ ಮಾಡಿಕೊಡುವುದಾಗಿ ಹೇಳಿದ್ದರು.
ಈ ಹಿನ್ನಲೆಯಲ್ಲಿ ಇಂದು ಪೂರ್ವ ಠಾಣೆಗೆ ಈ ಜೋಡಿ ಬರುವ ವೇಳೆ ಠಾಣೆಯ ಮುಂಭಾಗವೇ ಯುವತಿಯ ಸಂಬಂಧಿಕರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಯುವತಿಯನ್ನು ಕರೆದೊಯ್ದಿದ್ದಾರೆ.