ಬೆಂಗಳೂರು: ನಗರದಲ್ಲಿ ಜಲಮಂಡಳಿ ತೋಡಿದ್ದ ಗುಂಡಿಗೆ ಬೈಕ್ ಬಿದ್ದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಕೆಂಗೇರಿ ಹತ್ತಿರದ ಕೊಮ್ಮಘಟ್ಟ ಸರ್ಕಲ್ ಹತ್ತಿರ ನಡೆದಿದೆ. ಸದ್ದಾಂ ಪಾಷಾ(20) ಸಾವನ್ನಪ್ಪಿದ ಯುವಕ. ಅಲ್ಲದೇ, ಬೈಕ್ ನಲ್ಲಿದ್ದ ಇನ್ನಿಬ್ಬರಾದ ಉಮ್ರಾನ್ ಪಾಷಾ ಮತ್ತು ಮುಬಾರಕ್ ಪಾಷಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರೂ ಯುವಕರು ಒಂದೇ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಜಲ ಮಂಡಳಿ ಪೈಪ್ ಹಾಕುವುದಕ್ಕಾಗಿ ಗುಂಡಿ ತೋಡಿದ್ದರು. ಅಲ್ಲಿ ಬ್ಯಾರಿಕೇಡ್ ಕೂಡ ಹಾಕಿದ್ದರು. ಆದರೆ, ಸರ್ಕಲ್ ಹತ್ತಿರ ಬರುವಾಗಿ ಬ್ಯಾರಿಕೇಡ್ ನಡುವೆ ಇರುವ ಸಣ್ಣ ಜಾಗದಲ್ಲಿ ಪಾಷಾ ಬೈಕ್ ನುಗ್ಗಿಸಿದ್ದಾನೆ. ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ. ಕೂಡಲೇ ಸ್ಥಳೀಯರು ನೆರವಿಗೆ ಬಂದು ಗುಂಡಿಯಲ್ಲಿ ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಓರ್ವ ಯುವಕ ಸಾವನ್ನಪ್ಪಿದ್ದಾನೆ.