ಕಾರು ಹಾಗೂ ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರನ ದೇಹ ಕಾರಿನ ಮೇಲೆ ಬಿದ್ದರೂ ಕಾರು ಚಲಾಯಿಸಿರುವ ಘಟನೆ ನಡೆದಿದೆ.
ಅಪಘಾತವಾಗುತ್ತಿದ್ದಂತೆ ಕಾರಿನ ಮೇಲೆ ಬೈಕ್ ಸವಾರನ ದೇಹ ಬಿದ್ದಿದೆ. ಆದರೂ ಕಾರು ನಿಲ್ಲಿಸದ ಕಾರು ಚಾಲಕ ಬರೋಬ್ಬರಿ 18 ಕಿ.ಮೀ ಸಾಗಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಚಲಿಸುತ್ತಿದ್ದ ಟೊಯೊಟಾ ಇನ್ನೋವಾ ಕಾರಿನ ಮೇಲೆ ಶವ ಪತ್ತೆಯಾಗಿದೆ.
ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯರ್ರಿಸ್ವಾಮಿ ಸಾವನ್ನಪ್ಪಿದ ಬೈಕ್ ಸವಾರ ಎನ್ನಲಾಗಿದೆ. ಸದ್ಯ ಕಾರು ಚಾಲಕನ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಅನಂತಪುರ ಜಿಲ್ಲೆಯ ಆತ್ಮಕೂರು ಮಂಡಲದಲ್ಲಿ ಈ ಭಯಾನಕ ಘಟನೆ ನಡೆದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರು ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.