ಹುಬ್ಬಳ್ಳಿ: ಅಳಿಯನ ಮೇಲೆ ಕಾರು ಹಾಯಿಸಲು ಹೋದ ವ್ಯಕ್ತಿಯೊಬ್ಬಾತ ಐವರು ಪಾದಾಚಾರಿಗಳನ್ನು ಗಾಯಗೊಳಿಸಿರುವ ಘಟನೆ ನಡೆದಿದೆ.
ಈ ಘಟನೆ ನಗರದ ವಿದ್ಯಾನಗರದಲ್ಲಿ ನಡೆದಿದೆ. ಗಾಯಗೊಂಡವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಅಂಗಡಿಯೊಂದರಲ್ಲಿ ಐಶ್ವರ್ಯ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಚಾರವಾಗಿ ಐಶ್ವರ್ಯ ಪತಿ ವಿನೋದ್ ಬೊಂಗಾಳೆ ಹಾಗೂ ಐಶ್ವರ್ಯ ಸಹೋದರ ರಾಹುಲ್ ಮಧ್ಯೆ ಜಗಳ ನಡೆದಿತ್ತು. ಈ ವೇಳೆ ರೊಚ್ಚಿಗೆದ್ದ ಮಾವ ವಿನೋದ್ ಎಂಬಾತ ರಾಹುಲ್ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ರಾಹುಲ್ ತಪ್ಪಿಸಿಕೊಂಡಿದ್ದು, ಸಾರ್ವಜನಿಕರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮಂಜುನಾಥ ಪೂಜಾರಿ, ಪ್ರಶಾಂತ ಭೂತೆ, ಗರ್ಭಿಣಿ ಮಹಿಳೆಯಾದ ಅಶ್ವಿನಿ ಯಲಿಗಾರ, ಲಕ್ಷ್ಮೀ ಬೆಳವಡಿ, ಇಸ್ಮಾಯಿಲ್ ಯಾದವಾಡ ಗೊಂಡಿದ್ದಾರೆ. ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.