ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಬಿಬಿಎಂಪಿ ಮತ್ತು ಆಶಾ ಕಾರ್ಯಕರ್ತೆಯರ ಕಾರ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ 374 ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹೈಕೋರ್ಟ್ ರದ್ದುಪಡಿಸಿದೆ.
2020 ರಲ್ಲಿ ಸೋಂಕಿತರ ಪತ್ತೆ ಕಾರ್ಯದ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿ, ಟೇಬಲ್, ಟೆಂಟ್ ಕಿತ್ತೆಸೆದು ದಾಂಧಲೆ ನಡೆಸಿದ ಆರೋಪ ಈ ಜನರ ಮೇಲಿತ್ತು. ಹೀಗಾಗಿ ನವಾಜ್ ಪಾಷಾ ಸೇರಿ 375 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಆದರೆ, ಸಕ್ಷಮ ಪ್ರಾಧಿಕಾರಿ ಖಾಸಗಿ ದೂರು ದಾಖಲಿಸದ ಹಿನ್ನೆಲೆ ನ್ಯಾಯಮೂರ್ತಿ.ಕೆ.ನಟರಾಜನ್ ತಾಂತ್ರಿಕ ಕಾರಣಗಳಿಂದ ಕೇಸ್ ರದ್ದುಪಡಿಸಿ ಆದೇಶಿಸಿದ್ದಾರೆ.