2022 ಕ್ಕೆ ಬೆಂಗಳೂರಿನಲ್ಲಿ ಶುರುವಾಗಲಿದೆ 5ಜಿ ನೆಟ್ವರ್ಕ್ ತಂತ್ರಜ್ಞಾನ….
2022 ರಲ್ಲಿ ಭಾರತದಲ್ಲಿ 5G ಇಂಟರ್ನೆಟ್ ಸೇವೆಗಳನ್ನು ಹೊರತರಲಾಗುವುದು ಎಂದು ದೂರಸಂಪರ್ಕ ಇಲಾಖೆ ಘೊಷಿಸಿದೆ. ಅದರಂತೆ ದೇಶದಾದ್ಯಂತ 13 ನಗರಗಳು ಆರಂಭದಲ್ಲಿ 5G ಸೇವೆಯನ್ನ ಪಡೆಯಲಿವೆ. ಇದರಿಂದ ನೆಟ್ವರ್ಕ್ ಇನ್ನಷ್ಟು ಸ್ಪೀಡ್ ಅಗಲಿದೆ…
ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ. ಒಟ್ಟು 13 ನಗರಗಳಲ್ಲಿ ಮುಂದಿನ ವರ್ಷದಿಂದ 5ಜಿ ನೆಟ್ವರ್ಕ್ ಸೇವೆ ಶುರುವಾಗಲಿದೆ.
ಯಾವ ಟೆಲಿಕಾಂ ಆಪರೇಟರ್ ಕಂಪನಿ 5G ಸೇವೆಗಳನ್ನು ಹೊರತರಲಿದೆ ಎಂಬುದನ್ನು ಸರ್ಕಾರ ದೃಢಪಡಿಸಿಲ್ಲ. ಎಲ್ಲಾ ಮೂರು ಪ್ರಮುಖ ಟೆಲಿಕಾಂ ಆಪರೇಟರ್ಗಳಾದ Jio, Airtel ಮತ್ತು Vi (Vodafone Idea) ಈಗಾಗಲೇ ಈ ನಗರಗಳಲ್ಲಿ ಪ್ರಾಯೋಗಿಕ 5ಜಿ ಸೇವೆ ಸ್ಥಾಪಿಸಿವೆ.
2018 ರಲ್ಲಿ ಪ್ರಾರಂಭವಾದ ಸ್ಥಳೀಯ 5G ಟೆಸ್ಟ್ ಬೆಡ್ ಯೋಜನೆಗಾಗಿ DoT ( ದೂರ ಸಂಪರ್ಕ ಇಲಾಖೆ ) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಬಾಂಬೆ, IIT ದೆಹಲಿ, ಐಐಟಿ ಹೈದರಾಬಾದ್, ಐಐಟಿ ಮದ್ರಾಸ್, ಐಐಟಿ ಕಾನ್ಪುರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಬೆಂಗಳೂರು, ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ & ರಿಸರ್ಚ್ (ಸಮೀರ್) ಮತ್ತು ವೈರ್ಲೆಸ್ ಟೆಕ್ನಾಲಜಿಯಲ್ಲಿ ಶ್ರೇಷ್ಠತೆ ಕೇಂದ್ರ (ಸಿಇಡಬ್ಲ್ಯೂಐಟಿ). ಜೊತೆ ಸಂಶೋಧನಾ ಒಪ್ಪಂದ ಮಾಡಿಕೊಂಡಿದೆ.
224 ಕೋಟಿ ವೆಚ್ಚದ ಈ ಯೋಜನೆಯು ಡಿಸೆಂಬರ್ 31, 2021 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.