ಮಂಡ್ಯ: ದೇವೇಗೌಡರ ಕುಟುಂಬ ತಮ್ಮ ಕುಡಿಗಳನ್ನು ಅಧಿಕಾರಕ್ಕೆ ತರಲು ಒಂದೊಂದೆ ಬಲಿ ಪಡೆಯುತ್ತದೆ ಎಂದು ಮಾಜಿ ಸಂಸದ ಶಿವರಾಮೇಗೌಡ (Shivarame Gowda) ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದ (Mandya) ನಾಗಮಂಗಲದಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ಅವರು ಡಾ.ಮಂಜುನಾಥ್ ಗೆ ಟಿಕೆಟ್ ಕೊಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಈಗ ಯೋಗೇಶ್ವರ್ ರನ್ನು ದೇವೇಗೌಡರ ಕುಟುಂಬ ಬಲಿ ಪಡೆಯಿತು. ಚನ್ನಪಟ್ಟಣ ಜನ ದಡ್ಡರಲ್ಲ, ಯೋಗೇಶ್ವರ್ ಗೆಲುವು ನಿಶ್ಚಿತ ಎಂದಿದ್ದಾರೆ.
ನಿಖಿಲ್ ಅಲ್ಲ ಕುಮಾರಸ್ವಾಮಿ ನಿಂತರೂ ಏನು ಮಾಡೋಕೆ ಆಗಲ್ಲ. ಯೋಗೇಶ್ವರ್ ಪಕ್ಷ ತೊರೆಯಲು ವಿಜಯೇಂದ್ರ ಹಾಗೂ ಯಡಿಯೂರಪ್ಪ ಕಾರಣ. ಬಿಜೆಪಿ ಪಕ್ಷದ ಗುಂಪುಗಾರಿಕೆಯಿಂದ ಯೋಗೇಶ್ವರ್ ಹೊರಗೆ ಹೋದರು. ಈಗ ನಿಖಿಲ್ ಆಹುತಿಯಾಗುತ್ತಾನೆ ಎಂದಿದ್ದಾರೆ.
ಕುಮಾರಸ್ವಾಮಿ 2 ಬಾರಿ ಲಾಟರಿಯಲ್ಲಿ ಸಿಎಂ ಆದವರು. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಗಾಡಿ ನಿಂತಿತ್ತು. ಪಾಪ ಮುಳುಗುವ ಹಡಗು ಎಂದು ಮಂಡ್ಯ ಜನರ ಕೈ ಹಿಡಿದರು ಎಂದು ಗುಡುಗಿದ್ದಾರೆ.








