ಬೆಂಗಳೂರು: ಲಕ್ಷ್ಮೀ ಪೂಜೆಗೆ ಇಡಲಾಗಿದ್ದ ವಜ್ರ (Diamond) ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿರುವ ಘಟನೆಯೊಂದು ನಗರದ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಅಲ್ಲಿನ ಜವರೇಗೌಡ ನಗರದ ಅಪಾರ್ಟ್‌ಮೆಂಟ್‌ನ ಪ್ರೀತಿ ಎಂಬುವವರ ಮನೆಯಲ್ಲಿ ಪೂಜೆಗೆ ಇಟ್ಟಿದ್ದ ಚಿನ್ನಾಭರಣ ಹಾಗೂ ವಜ್ರದ ಆಭರಣಗಳನ್ನೇ ಖದೀಮರು ದೋಚಿ ಪರಾರಿಯಾಗಿದ್ದಾರೆ. ಒಂದು ಜೊತೆ ಬಳೆ, ಚಿನ್ನದ ಪೆಂಡೆಂಟ್, ಎರಡು ಜೊತೆ ವಜ್ರದ ಸ್ಟಡ್ಸ್, ಚಿನ್ನದ ಮಾಂಗಲ್ಯ ಸರ, ಎರಡು ಜೊತೆ ಚಿನ್ನದ ಕಿವಿ ಓಲೆ ಚಿನ್ನ, ವಜ್ರದ ಓಲೆ ದೋಚಿದ್ದಾರೆ ಎನ್ನಲಾಗಿದೆ.
ಮನೆಯವರು ಹೊರಗೆ ಹೋಗಿ ಬರುವಷ್ಟರಲ್ಲಿಯೇ ವಸ್ತುಗಳೆಲ್ಲ ನಾಪತ್ತೆಯಾಗಿವೆ. ಆಭರಣ ಕಳ್ಳತನದಿಂದ ಮನೆ ಮಂದಿ ಕಣ್ಣೀರು ಸುರಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡು ಖದೀಮರಿಗಾಗಿ ಬಲೆ ಬೀಸಿದ್ದಾರೆ.








