ನಿರ್ದೇಶಕ ಸೂರ್ಯ ಪ್ರಕಾಶ್ (Surya Prakash) ಹೃದಯ ಸ್ತಂಭನದಿಂದಾಗಿ (Cardiac Arrest) ಸಾವನ್ನಪ್ಪಿದ್ದಾರೆ.
ಅವರ ನಿಧನಕ್ಕೆ ತಮಿಳು ನಟ ಶರತ್ ಕುಮಾರ್ ದಂಪತಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ‘ಮಾಯಿ’ ಮತ್ತು ‘ದಿವಾನ್’ ಚಿತ್ರಗಳನ್ನು ನಿರ್ದೇಶಿಸಿದ ನನ್ನ ಆತ್ಮೀಯ ಸ್ನೇಹಿತ ಸೂರ್ಯ ಪ್ರಕಾಶ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರೊಂದಿಗೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಮಾತನಾಡಿದ್ದೆ. ಅವರ ಹಠಾತ್ ನಿಧನ ತುಂಬಾ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ನಟ ಶರತ್‌ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕಾಲಿವುಡ್ ನ ಸೂರ್ಯ ಪ್ರಕಾಶ್ ಅವರಿಗೆ 56 ವರ್ಷ ವಯಸ್ಸಾಗಿತ್ತು. ಆದರೆ, ಏಕಾಏಕಿ ಹೃದಯ ಸ್ತಂಭನಕ್ಕೆ ಅವರು ಬಲಿಯಾಗಿದ್ದಕ್ಕೆ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಚಿತ್ರರಂಗ ನಿರ್ದೇಶಕರ ಸಾವಿಗೆ ಮಮ್ಮಲ ಮರುಗಿದೆ. ಮಾಯಿ, ಮಣಿಕ್ಕಂ, ದಿವಾನ್, ಭರತಸಿಂಹ ರೆಡ್ಡಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಕರು ನೀಡಿದ್ದರು.