೧೫ ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ೧೯ ವರ್ಷದ ಯುವಕ ಹಾಗೂ ೫೯ ವರ್ಷದ ವೈದ್ಯನನ್ನು ಬಂಧಿಸಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಜುಲೈ ೬ ರಂದು ಬಾಲಕಿಯ ಗರ್ಭಪಾತ ಮಾಡಿ ಭ್ರೂಣವನ್ನು ತೆಗೆದು ಕಸ ಎಸೆಯುವ ಸ್ಥಳದಲ್ಲಿ ಬಿಸಾಡಿದ್ದ ಮಣಿನಗರದ ನಿವಾಸಿ ಡಾ. ಚೇತನ್ ಇದೀಗ ಅಹಮದಾಬಾದ್ ಪೊಲೀಸರ ಅಥಿತಿಯಾಗಿದ್ದಾನೆ. ಇನ್ನು ಯುವತಿ ಗರ್ಭಿಣಿಯಾಗುವುದಕ್ಕೆ ಕಾರಣನಾದ ೧೯ ವರ್ಷದ ಸುನೀಲ್ ಸರ್ಗರಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ ೧೫೦೦೦ರೂಗಳಿಗೆ ಆಸೆಪಟ್ಟು ಇಂತಹ ನೀಚ ಕೃತ್ಯ ಎಸಗಿದ ವೈದ್ಯ ಸದ್ಯ ಕಂಬಿ ಹಿಂದೆ ಬಿದ್ದಿದ್ದು ಆತನ ಲೈಸೆನ್ಸ್ ಕ್ಯಾನ್ಸಲ್ ಆಗುವ ಸಾಧ್ಯತೆಯೂ ಇದೆ. ಈಗ ಕಸದ ರಾಶಿಯಲ್ಲಿ ಭ್ರೂಣ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ರು. ತಾಂತ್ರಿಕ ಸಾಕ್ಷ್ಯಗಳ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಅತ್ಯಾಚಾರದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್
ಗದಗ: ಕರಾವಳಿ ಭಾಗದಲ್ಲಿ ಸಂಪುಟ ಸಭೆ ನಡೆಸಿ ಜೈಕಾರ ಹಾಕಿಸಿಕೊಳ್ಳುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗ ಉತ್ತರ ಕರ್ನಾಟಕದ ಭಾಗದಿಂದ ಭಾರೀ ಆಘಾತ ಎದುರಾಗಿದೆ. ಗದಗ ತಾಲ್ಲೂಕನ್ನು...








