ಮಾಸ್ಕ ಸಲುವಾಗಿ ಕಿರಿಕ್ ಮಾಡಿದ ವೈದ್ಯೆ Saaksha Tv
ಬೆಳಗಾವಿ: ಕೊರೊನಾ ಮೂರನೇ ಅಲೆ ವೇಗವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ಸರಕಾರ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯ ಗೊಳಿಸಿದೆ. ಆದರೆ ನಗರದ ಚೆನ್ನಮ್ಮ ವೃತ್ತದಲ್ಲಿ ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ಡಿಸಿಪಿ ಜೊತೆ ವೈದ್ಯೆ ಕಿರಿಕ್ ಮಾಡಿದ್ದಾರೆ.
ಇಂದು ಮುಂಜಾನೆ ವೈದ್ಯ ಮತ್ತು ಕಾರು ಚಾಲಕ ಕಾರಿನಲ್ಲಿ ಮಾಸ್ಕ್ ಹಾಕದೇ ಹೋಗುತ್ತಿದ್ದರು. ಈ ವೇಳೆ ವೈದ್ಯೆಯ ಕಾರು ನಿಲ್ಲಿಸಿ ಪೊಲೀಸರ ತಪಾಸಣೆ ನಡೆಸಿ, ಮಾಸ್ಕ್ ಹಾಕಿಕೊಳ್ಳುವಂತೆ ಡಿಸಿಪಿ ರವೀಂದ್ರ, ಸಲಹೆ ನೀಡಿದರು.
ಆದರೆ ಕಾರು ಚಾಲಕ ಇದಕ್ಕೆ ರಸ್ತೆಯಲ್ಲಿ ಓಡಾಡುವವರು ಮಾಸ್ಕ್ ಹಾಕಿಲ್ಲ. ನಿಮ್ಮ ಪೊಲೀಸರು ಮಾಸ್ಕ್ ಹಾಕಿಲ್ಲ ಅಂತ ವಾದಮಾಡಿದ್ದಾರೆ. ಕೊನೆಗೆ ವೈದ್ಯ ಪೊಲೀಸರಿಗೆ ಕೈಮುಗದಿದ್ದಾರೆ. ಆಗ ವೈದ್ಯೆಗೆ ದೊಡ್ಡ ನಮಸ್ಕಾರ ಹೋಗಮ್ಮ ಅಂತ ಡಿಸಿಪಿ ಹೇಳಿದರು.