ಮಂಡ್ಯ: ಡ್ರೈವಿಂಗ್ ಸ್ಕೂಲ್ ಕಾರೊಂದು ಕಾಲುವೆಗೆ ಬಿದ್ದಿರುವ ಘಟನೆ ನಡೆದಿದೆ.
ಇಲ್ಲಿಯ ಚಾಮುಂಡೇಶ್ವರಿ ನಗರದ ಹತ್ತಿರದ ಕಾಲುವೆಗೆ ನಿಯಂತ್ರಣ ತಪ್ಪಿದ ಪರಿಣಾಮ ಡ್ರೈವಿಂಗ್ ಸ್ಕೂಲ್ ಕಾರು ಬಿದ್ದಿದೆ. ಆದರೆ, ಘಟನೆಯಲ್ಲಿ ಅದೃಷ್ಟವಶಾತ್ ಡ್ರೈವಿಂಗ್ ಕಲಿಯುತ್ತಿದ್ದ ಯುವತಿ ಹಾಗೂ ತರಬೇತುದಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕಾರು ನಿತಿನ್ ಎಂಬುವವರ ಡ್ರೈವಿಂಗ್ ಸ್ಕೂಲ್ ಗೆ ಸೇರಿದ್ದ ಕಾರು ಎನ್ನಲಾಗಿದೆ. ತರಬೇತಿ ನೀಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.