ಬೆಂಗಳೂರು: ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯ ದಿನಾಂಕವನ್ನು ಮಾರ್ಚ್ 16ರಂದು ಮಧ್ಯಾಹ್ನ 3ಕ್ಕೆ ಘೋಷಿಸುವ ಸಾಧ್ಯತೆ ಇದೆ.
ಅದರ ಬೆನ್ನಲ್ಲೇ, ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಹೀಗಾಗಿ ಎರಡು ತಿಂಗಳ ಕಾಲ ಆಡಳಿತ ಯಂತ್ರವು ಜನಪ್ರತಿನಿಗಳ ಹಿಡಿತ ಕಳೆದುಕೊಂಡು ನೌಕರಶಾಹಿ ತೆಕ್ಕೆಗೆ ಉರುಳಲಿದೆ. ಮಧ್ಯಾಹ್ನ 3ಕ್ಕೆ ಲೋಕಸಭೆ ಮತ್ತು ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಮಳೆಯಾಗದೆ ಬರಗಾಲ ಎದುರಿಸುತ್ತಿರುವ ರಾಜ್ಯದ ಉದ್ದಗಲಕ್ಕೂ ಬೇಸಿಗೆ ಸಮಸ್ಯೆಗಳು ತೀವ್ರಗೊಂಡಿವೆ. ನಾನಾ ಭಾಗಗಳಲ್ಲಿಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಸಿದ್ಧತೆಯಾಗಿದ್ದರೂ ಚುನಾಯಿತ ಸರಕಾರದ ಹಿಡಿತವಿಲ್ಲದ ಆಡಳಿತ ಯಂತ್ರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲಿದೆಯೇ ಕಾಯ್ದು ನೋಡಬೇಕಿದೆ.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಕೆಲಸಗಳಿಗೆ ಚಾಲನೆ ನೀಡುವ ಕೆಲಸ ಮಾಡಿತ್ತು. ಇವೆಲ್ಲವೂ ಇನ್ನು ಸುಮಾರು ಎರಡು ತಿಂಗಳ ಕಾಲ ತೋರಿಕೆಗೆ ಮಾತ್ರ ಸೀಮಿತವಾಗಲಿದ್ದು, ಬಹುತೇಕ ಕೆಲಸಗಳು ನಿರೀಕ್ಷಿತ ವೇಗ ಪಡೆಯುವುದಿಲ್ಲ ಎನ್ನಲಾಗುತ್ತಿದೆ.