ಬೆಳಗಾವಿ: ವಿದ್ಯಾರ್ಥಿನಿಯ ಅಪಹರಣಕ್ಕೆ ದುಷ್ಕರ್ಮಿಗಳು ಯತ್ನಿಸಿದ್ದು, ಕಚ್ಚಿ ವಿದ್ಯಾರ್ಥಿನಿ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ.
ಶಾಲೆಯ ಹತ್ತಿರವೇ ಎರಡನೇ ತರಗತಿ ವಿದ್ಯಾರ್ಥಿನಿಯ (Student) ಅಪಹರಣಕ್ಕೆ (Kidnap) ಯತ್ನಿಸಿರುವ ಘಟನೆ ಚಿಕ್ಕೋಡಿ (Chikodi) ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ. ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಅಪಹರಿಸಲು ಬೈಕ್ ಮೇಲೆ ಬಂದು ವಿಫಲ ಯತ್ನ ನಡೆಸಿ ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಶಾಲೆ ಕಾಂಪೌಂಡ್ ಹತ್ತಿರ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕುಳಿತ ಕಿಡ್ನಾಪರ್ಸ್ ವಿದ್ಯಾರ್ಥಿನಿ ಬರುವುದನ್ನೇ ಕಾಯುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿ ಹೊರಗೆ ಬರುತ್ತಿದ್ದಂತೆ ಅಪಹರಿಸಿ 200 ಮೀಟರ್ ಓಡಿದ್ದಾನೆ. ನಂತರ ವಿದ್ಯಾರ್ಥಿಯು ಕೈಗೆ ಕಚ್ಚಿ ಆತನಿಂದ ತಪ್ಪಿಸಿಕೊಂಡಿದ್ದಾಳೆ ಎನ್ನಲಾಗಿದೆ.
ವಿದ್ಯಾರ್ಥಿನಿ ಕಿರುಚಾಟದಿಂದ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದಾನೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಿಸಿಟಿವಿ ಪರಿಶೀಲನೆ ನಡೆಸಿ ಮಕ್ಕಳ ಕಳ್ಳರ ಕುರಿತು ಪೊಲೀಸ್ ಪ್ರಕಟಣೆ ಜಾರಿ ಮಾಡಿದ್ದಾರೆ.