ಕಲಬುರಗಿ: ಬಿಸಿ ಸಾಂಬಾರ್ ನಲ್ಲಿ ಬಿದ್ದ ಬಾಲಕಿ ಜೀನ್ಮರಣದ ನಡುವೆ ಹೋರಾಟ ಮಾಡುತ್ತಿದ್ದು, ಶಾಲೆಯ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಜಿಲ್ಲೆಯ ಅಫಜಲಪುರ(Afzalpur) ತಾಲೂಕಿನ ಚಿಣಮಗೇರಾ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಮಹಾಂತಮ್ಮ ತೀವ್ರವಾಗಿ ಗಾಯಗೊಂಡಿದ್ದಳು. ಆದರೆ, ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾಳೆ. ಸದ್ಯ ಚಿಣಮಗೇರಾ ಶಾಲೆಯ ಮುಖ್ಯಶಿಕ್ಷಕಿ ಹಾಗೂ ಸಹಶಿಕ್ಷಕನನ್ನು ಅಮಾನತು ಮಾಡಿ ಕಲಬುರಗಿ ಡಿಡಿಪಿಐ ಸಕ್ರೆಪ್ಪಗೌಡ ಬಿರಾದರ ಆದೇಶ ಹೊರಡಿಸಿದ್ದಾರೆ. ಮುಖ್ಯಶಿಕ್ಷಕಿ ಲಾಲಬಿ ನಾದಾಫ್, ಸಹಶಿಕ್ಷಕ ರಾಜು ಚವ್ಹಾಣ ಅಮಾನತುಗೊಂಡಿದ್ದಾರೆ.
ಮಹಾಂತಮ್ಮ, ಊಟ ಮಾಡಲು ಅಡುಗೆ ಕೋಣೆಯತ್ತ ಹೋಗಿದ್ದಾಳೆ. ಈ ವೇಳೆ ಮಹಾಂತಮ್ಮ ಆಯಾತಪ್ಪಿ ಬಿಸಿಯೂಟದ ಸಾಂಬಾರ್ ಪಾತ್ರೆಗೆ ಬಿದ್ದಿದ್ದಾಳೆ. ತೀವ್ರ ಗಾಯಗಳಾಗಿದ್ದ ಮಹಾಂತಮ್ಮನನ್ನು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.