ಇತ್ತೀಚೆಗೆ ಮಕ್ಕಳು ಮೊಬೈಲ್ ಗೀಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಮೊಬೈಲ್ ಗೀಳು ಕೆಲವೊಮ್ಮೆ ಪ್ರಾಣಕ್ಕೂ ಕುತ್ತು ತರುವ ಮಟ್ಟಿಕ್ಕೂ ಕಾರಣವಾಗುತ್ತಿದೆ.
ಮೊಬೈಲ್ ಬಳಸಬೇಡ ಎಂದು ಪೋಷಕರು ಹೇಳಿದ್ದಕ್ಕೆ ಬೇಸರಗೊಂಡ ಶಾಲಾ ಬಾಲಕಿಯೊಬ್ಬಳು 90 ಅಡಿ ಆಳದ ಜಲಪಾತದಿಂದ ಹಾರಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.
ಆದರೆ, ಅದೃಷ್ಟವಶಾತ್ ಬಾಲಕಿ ಬದುಕಿ ಉಳಿದಿದ್ದಾಳೆ. ಪತ್ರಕರ್ತೆ ಅನ್ನು ಸುಶ್ರೀ ಸಂಗೀತಾ ಎಂಬವರು ಈ ವಿಡಿಯೋ ವನ್ನು ಟ್ವೀಟ್ ಮಾಡಿದ್ದಾರೆ. ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಮಕ್ಕಳನ್ನು ಫೋನ್ ಗಳಿಂದ ದೂರವಿಡಿ ಎಂದು ಆಕೆ ಮನವಿ ಮಾಡಿದ್ದಾರೆ.