ಅನಿಲ್ ಅಂಬಾನಿ ಒಡೆತನದ ಮುಂಬೈನ ಉಪನಗರದಲ್ಲಿನ ಸಾಂತಕ್ರೂಝ್ ನಲ್ಲಿರುವ ಕೇಂದ್ರ ಕಚೇರಿಯನ್ನು ಯೆಸ್ ಬ್ಯಾಂಕ್ ಸ್ವಾಧೀನಪಡಿಸಿಕೊಂಡಿದೆ. ಅನಿಲ್ ಅಂಬಾನಿ ಗ್ರೂಪ್ ಕಂಪೆನಿ ಯೆಸ್ ಬ್ಯಾಂಕಿನಿಂದ 2 ಸಾವಿರದ 892 ಕೋಟಿ ರೂಪಾಯಿ ಸಾಲ ಪಡೆದಿತ್ತು. ಆದ್ರೆ ಸಾಲವನ್ನು ಹಿಂತಿರುಗಿಸಲಾಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವ ಎಸ್ ಬ್ಯಾಂಕ್ ಕೇಂದ್ರ ಕಚೇರಿಯನ್ನು ಸ್ವಾಧೀನಪಡಿಸಿಕೊಂಡಿದೆ. ಜೊತೆಗೆ ದಕ್ಷಿಣ ಮುಂಬೈಯ ರಿಲಯನ್ಸ್ ಇನ್ಪ್ಫ್ರಾಸ್ಟ್ರಕ್ಚರ್ ಗೆ ಸೇರಿದ ಎರಡು ಫ್ಲಾಟ್ ನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಕಳೆದ ಮೇ 6ರಂದು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ನಿಂದ 2 ಸಾವಿರದ 892.44 ಕೋಟಿ ರೂಪಾಯಿ ಸಾಲ ಬಾಕಿಯನ್ನು ವಶಪಡಿಸಿಕೊಳ್ಳಬೇಕಾಗಿತ್ತು. ಸಾಲ ಹಿಂತಿರುಗಿಸದಿದ್ದಾಗ ಕಂಪೆನಿಗೆ 60 ದಿನಗಳ ನೊಟೀಸ್ ನೀಡಲಾಗಿತ್ತು. ಅದಕ್ಕೂ ಕಂಪೆನಿ ಭರಿಸಲು ಸಾಧ್ಯವಾಗದ ಪರಿಣಾಮ ಮೂರು ಆಸ್ತಿಗಳನ್ನು ವಶಪಡಿಸಿಕೊಂಡಿದ್ದು, ನಾಗರಿಕರು ಈ ಆಸ್ತಿಗಳ ಜೊತೆ ವ್ಯವಹಾರ ಮಾಡದಂತೆ ಸೂಚಿಸಲಾಗಿದೆ. ಇತ್ತೀಚೆಗೆ ಅನಿಲ್ ಧೀರುಬಾಯಿ ಅಂಬಾನಿ ಗ್ರೂಪ್ ಗೆ ಸೇರಿದ ಬಹುತೇಕ ಕಂಪೆನಿಗಳು ಸಾಂತಕ್ರೂಝ್ ಕಚೇರಿಯಿಂದ ಹೊರಬಂದು ರಿಲಯನ್ಸ್ ಸೆಂಟರ್ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿದ್ದವು. ಇದೀಗ ಕಂಪನಿ ನಷ್ಟ ಅನುಭವಿಸುತ್ತಿದ್ದ ಕೇಂದ್ರ ಕಚೇರಿಯನ್ನೂ ಸಹ ಬಂದ್ ಮಾಡಲಾಗಿದೆ.
ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ
ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...








