ಐಸಿಸಿ ಟ್ರೋಫಿ ನನ್ನ ಗುರಿ : ರೋಹಿತ್ Rohit saaksha tv
ಟೀಂ ಇಂಡಿಯಾದ ನೂತನ ನಾಯಕನಾಗಿ ಜವಾಬ್ದಾರಿಗಳನ್ನು ವಹಿಸಿಕೊಂಡ ರೋಹಿತ್ ಶರ್ಮಾ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕ್ಯಾಪ್ಟನ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರುವ ರೋಹಿತ್, ನಾಯಕನಾಗಿ ನನ್ನದೇಯಾದ ವಿಷನ್ ಇದೆ. ಮುಂಬರುವ ವರ್ಷಗಳಲ್ಲಿ ಐಸಿಸಿ ಟ್ರೋಫಿಗಳನ್ನು ಗೆಲ್ಲುವುದೇ ನನ್ನ ಗುರಿಯಾಗಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ ಅದಕ್ಕಾಗಿ ಯಾವ ರೀತಿ ತಂಡವನ್ನು ಕಟ್ಟಬೇಕು ಎಂಬುದನ್ನು ಕೂಡ ರೋಹಿತ್ ಈ ವೇಳೆ ತಿಳಿಸಿದ್ದಾರೆ.
ಟೀಂ ಇಂಡಿಯಾ ಪರ ಆಡುತ್ತಿದ್ದಾಗ ವ್ಯಕ್ತಿಗತ ದಾಖಲೆಗಳಿಗಿಂತ ತಂಡಕ್ಕಾಗಿ ಆಡಬೇಕು. ಸೀರಿಯಸ್ ಆಗಿ ಆಡುತ್ತಿರುವಾಗ ನಮ್ಮ ಬೆಸ್ಟ್ ಕೊಡೋಕೆ ಪ್ರಯತ್ನಿಸಬೇಕು. ವಿಶೇಷವಾಗಿ ಐಸಿಸಿ ಟೋರ್ನಮೆಂಟ್‌ಗಳಲ್ಲಿ ರನ್‌ಗಳು.. ಸೆಂಚರಿಗಳು.. ದಾಖಲೆಗಳು ಬ್ರೇಕ್ ಮಾಡುವುದಕ್ಕಿಂತ ಪ್ರಶಸ್ತಿ ಗೆಲ್ಲುವುದೇ ನಮ್ಮ ಧ್ಯೇಯ ಆಗಬೇಕು .
”ವೈಟ್‌ಬಾಲ್ ಕ್ರಿಕೆಟ್ ಎಂದರೆ ಒಂದು ದಿನ.. ಅಥವಾ ನಾಲ್ಕು ಗಂಟೆಗಳಲ್ಲಿ ಮುಗಿಯುವ ಆಟ. ಆ ದಿನ ಯಾರು ಚೆನ್ನಾಗಿ ಆಡುತ್ತಾರೆ ಎಂಬುದರ ಮೇಲೆ ಸ್ಪಷ್ಟತೆ ಇರಬೇಕು. ಇದಕ್ಕಾಗಿ ಮೊದಲು ತಂಡದ ಆಯ್ಕೆ ಮುಖ್ಯ. ಫಾರ್ಮ್ ನಲ್ಲಿರುವ ಆಟಗಾರನ ಆಯ್ಕೆ ಅಲ್ಲದೇ ಸರಿಯಾದ ಸಮಯಕ್ಕೆ ಸರಿಯಾದ ಆಟಗಾರರನ್ನು ಕಳುಹಿಸುವುದು ಮುಖ್ಯ. ಕೋಹ್ಲಿ, ರವಿಶಾಸ್ತ್ರಿ ಇರುವ ಸಮಯದಲ್ಲಿ ಇಂತಹದ್ದು ಬಹಳ ಕಡಿಮೆ ನಡೆದೇನೆಂದು ನನ್ನ ಅಭಿಪ್ರಾಯ ಎಂದು ರೋಹಿತ್ ಶರ್ಮಾ, ವಿರಾಟ್ ಗೆ ಟಾಂಗ್ ನೀಡಿದ್ದಾರೆ.
”ಮ್ಯಾಚ್ ರೋಚಕತೆಯಿಂದ ಕೂಡಿದ್ದಾಗ ಒತ್ತಡಕ್ಕೆ ಒಳಗಾಗುವುದು ಸಹಜ, ಆದ್ದರಿಂದ ಪರಿಸ್ಥಿತಿ ದಾರುಣವಾಗಿ ಇದ್ದಾಗ ಮೂರನೇ ನಂಬರ್‌ನಿಂದ 10ನೇ ನಂಬರ್ ವರೆಗೆ ಬ್ಯಾಟಿಂಗ್ ಮಾಡಬಲ್ಲ ತಂಡವನ್ನು ತಯಾರಿಸಬೇಕು. ಐಸಿಸಿಯಂತಹ ಮೇಜರ್ ಟೋರ್ನಿಯಲ್ಲಿ ಇದು ತುಂಬಾ ಅಗತ್ಯ. ಬರುವ ವರ್ಷದಲ್ಲಿ ಈ ಬಗ್ಗೆ ಸ್ವಲ್ಪ ಗಮನ ಹಾಕಬೇಕು. ಜೊತೆಗೆ ಮಿಡಲ್ ಆರ್ಡರ್ ವಿಷಯದಲ್ಲಿಯೂ ಒಂದು ಕ್ಲಾರಿಟಿ ಅಗತ್ಯವಿದೆ ಎಂದು ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸೂಚನೆಗಳನ್ನ ಕೊಟ್ಟಿದ್ದಾರೆ.
”ನಾ ದೃಷ್ಟಿಯಲ್ಲಿ ನಾಯಕ ಎಂಬವನು ತಂಡದಲ್ಲಿ ಅತ್ಯಂತ ಕಡಿಮೆ ಸ್ಥಾನದಲ್ಲಿರುತ್ತಾನೆ. ಏಕೆಂದರೆ ತಂಡವನ್ನು ಮುನ್ನಡೆಸುತ್ತಾ .. ಉತ್ತಮ ಭವಿಷ್ಯ ಇರುವ ಆಟಗಾರರಿಗೆ ಅವಕಾಶಗಳನ್ನ ನೀಡಿ ಅವರಲ್ಲಿ ಕಾನ್ಫಿಡೆನ್ಸ್ ಲೆವೆಲ್ಸ್ ಹೆಚ್ಚಿಸಬೇಕು ಎಂದು ರೋಹಿತ್ ತಮ್ಮ ಸಿದ್ದಾಂತವನ್ನು ಪ್ರತಿಪಾದಿದ್ದಾರೆ.









