ಬೆಂಗಳೂರು: ಮೊಟ್ಟೆ ತಿನ್ನುವ ವಿಚಾರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ(Machohalli)ಯಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಪೂಜಾ(31) ಆತ್ಮಹತ್ಯೆಗೆ ಶರಣಾದ ಮಹಿಳೆ. ಪೊಲೀಸರು ಪತಿ ಅನಿಲ್ ಕುಮಾರ್(35)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ದಂಪತಿ ಕಳೆದ ಎರಡು ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು.
ಇಬ್ಬರೂ ಊಟ್ಟಕೆಂದು ಕುಳಿತುಕೊಂಡಿದ್ದ ಸಂದರ್ಭದಲ್ಲಿ ಮೊಟ್ಟೆ ವಿಚಾರಕ್ಕೆ ಜಗಳ ನಡೆದಿದೆ. ಒಂದು ಮೊಟ್ಟೆ ಹೆಚ್ಚು ತಿನ್ನುವುದಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ. ನಾನು ಯಜಮಾನ ನನಗೆ ಒಂದು ಮೊಟ್ಟೆ ಹೆಚ್ಚು ಬೇಕು ಎಂದು ಗಲಾಟೆ ಮಾಡಿದ್ದಾನೆ. ಅಲ್ಲದೇ, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಪತಿಯ ಈ ನಡತೆಗೆ ಬೇಸತ್ತ ಮಹಿಳೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.