ಮದರಸಾ ನೆಲಸಮ ಮಾಡಿದ ವೇಳೆ ಹಿಂಸಾಚಾರ ನಡಿದ್ದು, 4 ಜನ ಸಾವನ್ನಪ್ಪಿ ಸುಮಾರು 150 ಜನರು ಗಾಯಗೊಂಡಿರುವ ಘಟಡನೆ ಉತ್ತರಾಖಂಡ(Uttarakhand)ದ ಹಲ್ದ್ವಾನಿಯಲ್ಲಿ ನಡೆದಿದೆ.
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮದರಸಾವನ್ನು ಪೊಲೀಸ್ ಸಿಬ್ಬಂದಿ ನೆಲಸಮ ಮಾಡಿದ್ದರು. ಆನಂತರ ಹಿಂಸಾಚಾರ ನಡೆದಿದ್ದು, ಸ್ಥಳೀಯರು ಹಾಗೂ ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ ಎನ್ನಲಾಗಿದೆ.
ಬಂಭುಲ್ಪುರ ಠಾಣೆಯ ಪೊಲೀಸ್ ತಂಡವು ‘ಮಲಿಕ್ ಕಾ ಬಗೀಚಾ’ ಎಂಬ ಸ್ಥಳದಲ್ಲಿದ್ದ ಅಕ್ರಮ ಮದರಸಾ ಮತ್ತು ನಮಾಜ್ ಸ್ಥಳವನ್ನು ನೆಲಸಮಗೊಳಿಸಿತ್ತು. ಇದಕ್ಕೆ ಆಕ್ರೋಶಗೊಂಡ ಸ್ತಳೀಯರು ತಂಡದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.