ಕರಾವಳಿಯ ದೈವ ಮತ್ತು ದೇವರನ್ನು ಸಮಾನವಾಗಿ ಅಲ್ಲಿಯ ಜನರು ಪೂಜಿಸುತ್ತಾರೆ. ತುಳುನಾಡಿನಲ್ಲಿ ಕೊರಗಜ್ಜ (Koragajja) ದೈವ ಬೇಡಿದವರ ಇಷ್ಟಾರ್ಥ ನೆರವೇರಿಸುವುದರ ಜೊತೆಗೆ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ನಂಬಿಕೆ ಇದೆ. ಪವಾಡವಿರುವ ಕೊಡಗಜ್ಜನ ಗುಡಿಗೇ ವ್ಯಕ್ತಿಯೊಬ್ಬ ಬೆಂಕಿ ಇಟ್ಟ ಘಟನೆ ನಡೆದಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ (Belthangady) ತಾಲೂಕು ವೇಣೂರು ಗ್ರಾಮದ ಬಾಡಾರು ಎಂಬಲ್ಲಿ ನಡೆದಿದೆ. ಬಾಡಾರಿನ ಕೊರಗಕಲ್ಲು ಎಂಬಲ್ಲಿ ನಡೆದಿದೆ. ಜನರು ಸಮಿತಿ ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ ಮಾಡುತ್ತಿದ್ದರು. ಆದರೆ ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಗುಡಿ ಇರುವ ಜಾಗ ಖಾಸಗಿ ಕುಟುಂಬಸ್ಥರದ್ದು, ಸಾರ್ವಜನಿಕ ಹಸ್ತಕ್ಷೇಪ ಮಾಡಬಾರದೆಂದು ತಗಾದೆ ಎತ್ತಿದ್ದರು. ಹೀಗಾಗಿ ತಗಾದೆ ಶುರುವಾಗಿತ್ತು. ಸದ್ಯ ಸ್ಥಳೀಯ ವ್ಯಕ್ತಿ ಕೊರಗಜ್ಜನ ಗುಡಿಗೇ ಬೆಂಕಿ ಇಟ್ಟಿದ್ದಾನೆ. ಸ್ಥಳೀಯರು ಪೊಲೀಸ್ ಠಾಣೆಗೆ ದಾರು ಸಲ್ಲಿಸಿದ್ದಾರೆ.