ಚಿನ್ನ ಖರೀದಿಗೆ ಹೋದವ ಶವವಾಗಿ ಪತ್ತೆ Saaksha Tv
ರಾಮನಗರ: ಮೃತದೇಹವನ್ನ ಮೂಟೆ ಕಟ್ಟಿ ಕೆರೆಗೆ ಬಿಸಾಕಿರುವ ಘಟನೆ ರಾಮನಗರದ ಮಾಗಡಿ ಪಟ್ಟಣದಲ್ಲಿ ನಡೆದಿದೆ.
ಬೆಂಗಳೂರಿನ ಬನಶಂಕರಿಯ ಸರಬಂಡೆ ಪಾಳ್ಯದ ನಿವಾಸಿ ದಿವಾಕರ್ ಮೃತ ವ್ಯಕ್ತಿಯಾಗಿದ್ದಾನೆ. ಈತ ಜನವರಿ 20ರಂದು ಚಿನ್ನ ಖರೀದಿಸಲು ಮನೆಯಿಂದ 5 ಲಕ್ಷ ರೂಪಾಯಿ ತೆಗದುಕೊಂಡು ಹೋಗಿದ್ದರು. ಹೀಗೆ ಮನೆಯಿಂದ ಹೋಗಿದ್ದ ದಿವಾಕರ್ ವಾಪಸ್ ಆಗಿರಲಿಲ್ಲ. ಹೀಗಾಗಿ ದಿವಾಕರ್ ತಾಯಿ ಮಗನನ್ನು ಹುಡುಕಿಕೊಡಿ ಎಂದು ಕಂಪ್ಲೇಟ್ ಕೊಟ್ಟಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ದಿವಾಕರ್ ನಿಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಮಧ್ಯೆ ಮಾಗಡಿ ಪಟ್ಟಣದ ಕೆರೆಯಲ್ಲಿ ಶವ ಪತ್ತೆಯಾಗಿರುವ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ದಿವಾಕರ್ ಮೃತ ದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಸಿಕ್ಕ ಕುರುಗಳ ಆಧಾರದ ಮೇಲೆ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.