ನಾಪತ್ತೆಯಾಗಿದ್ದ ಯುವಕ ನಾಲೆಯಲ್ಲಿ ಶವವಾಗಿ ಪತ್ತೆ mandya saaksha tv
ಮಂಡ್ಯ : ನಾಪತ್ತೆಯಾಗಿದ್ದ ಯುವಕ ನಾಲೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಗುಡಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
25 ವರ್ಷದ ಮಧು ಮೃತ ಯುವಕನಾಗಿದ್ದಾರೆ.
ಮಧು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಇಂದು ಗ್ರಾಮದ ಸಮೀಪದ ವಿಸಿ ಉಪನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನ್ನು ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









