ಹುಬ್ಬಳ್ಳಿ : ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಇಲ್ಲಿಯ ಎಪಿಎಂಸಿ-ಮಾರಡಗಿ ರಸ್ತೆಯಲ್ಲಿ ನಡೆದಿದೆ. ಬಂಜಾರ ಕಾಲೋನಿ ನಿವಾಸಿ ಚಂದ್ರಶೇಖರ ಲಮಾಣಿ (40) ಕೊಲೆಯಾದ ವ್ಯಕ್ತಿ. ಪತ್ನಿ ಮಂಜುಳಾ ಹಾಗೂ ಪ್ರಿಯಕರ ರಿಯಾಜ್ ಅಹ್ಮದ್ ಕೊಲೆ ಮಾಡಿರುವ ಆರೋಪಿಗಳು.
ಇತ್ತೀಚೆಗೆ ಎಪಿಎಂಸಿ (APMC) ಮಾರಡಗಿ ರಸ್ತೆಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರ (Police) ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಇನ್ನೊಂದೆಡೆ ಪತ್ನಿ ಪತಿಯ ಸಾವಿನ ಶಂಕೆ ವ್ಯಕ್ತಪಡಿಸಿ ನವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆನಂತರ ಪೊಲೀಸರು ತನಿಖೆ ಕೈಗೊಂಡಾಗ ಈ ಸತ್ಯ ಬಯಲಿಗೆ ಬಂದಿದೆ.
ಮಂಜುಳಾ, ಕಳೆದ ಐದು ವರ್ಷಗಳಿಂದ ರಿಯಾಜ್ ಅಹ್ಮದ್ ನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಳೆ. ಇದಕ್ಕೆ ಪತಿ ವಿರೋಧ ಮಾಡುತ್ತಿದ್ದಂತೆ ಪ್ರಿಯಕರ ರಿಯಾಜ್ ಅಹ್ಮದ್ ಗೆ ಈ ವಿಚಾರ ಹೇಳಿ ಕೊಲೆ ಮಾಡಿದ್ದಾಳೆ ಎಂಬುವುದನ್ನು ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಆರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ.