ಬೆಂಗಳೂರು: ಸಂಶಯಸ್ಥ ವ್ಯಕ್ತಿಯೊಬ್ಬ ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಇಲ್ಲಿಯ ಕೊರಮಂಗಲದ ರೆಸಿಡೆನ್ಶಿಯಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇಂದು ಕೊಲೆಯಾದ ಪತ್ನಿಯಾಗಿದ್ದರೆ, ಸೆಲ್ವನ್ ಫ್ರಾನ್ಸಿಸ್ ಕೊಲೆ ಆರೋಪಿ ಎನ್ನಲಾಗಿದೆ. ಆರೋಪಿ ಹಾಗೂ ಕೊಲೆಯಾದ ಮಹಿಳೆ ಬರೋಬ್ಬರಿ 12 ವರ್ಷಗಳ ಹಿಂದೆಯೇ ಪ್ರೀತಿಸಿ ಕುಟುಂಬಸ್ಥರ ವಿರೋಧದ ಮದ್ಯೆ ವಿವಾಹವಾಗಿದ್ದರು. ಚಿಕ್ಕವಯಸ್ಸಿನಲ್ಲಿಯೇ ಇವರು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಇತ್ತೀಚೆಗೆ ಇಂದು ಕೂಡ ಕೆಲಸ ಮಾಡಲು ಆರಂಭಿಸಿದ್ದಳು. ಆದರೆ, ಸೆಲ್ವನ್ ಹೆಚ್ಚು ಅನುಮಾನ ಪಡುತ್ತಿದ್ದ.
ಹೀಗಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಆತನ ಅನುಮಾನ ಹಾಗೂ ಜಗಳ ಹೆಚ್ಚಾಗುತ್ತಿದ್ದಂತೆ ಇಂದು ತವರು ಮನೆ ಸೇರಿದ್ದರು. ಆದರೂ ಆತ ಅಲ್ಲಿಗೆ ಹೋಗಿ ಜಗಳವಾಡುತ್ತಿದ್ದ. ಈ ಕುರಿತು ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಆತ ಬದಲಾಗಿರಲಿಲ್ಲ. ಇತ್ತೀಚೆಗೆ ಕೆಲಸ ಮಾಡುವ ಸ್ಥಳಕ್ಕೂ ಹೋಗಿ ಗಲಾಟೆ ಮಾಡುತ್ತಿದ್ದ. ಆದರೆ, ಮತ್ತೊಮ್ಮೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ಕೋಪಗೊಂಡು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಪೊಲೀಸರು ಸುದ್ದಿ ತಿಳಿದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅದರೆ ಮಹಿಳೆ ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.