ಮ್ಯಾರಥಾನ್ ನಲ್ಲಿ ವಿಶ್ವದಾಖಲೆ ಮಾಡಿದ್ದ ಆಟಗಾರ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ದಾಖಲೆ ಬರೆದಿದ್ದ ಕೆಲ್ವಿನ್ ಕಿಪ್ಟಮ್ (Kelvin Kiptum) ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೀನ್ಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೆಲ್ವಿನ್ ಹಾಗೂ ಅವರ ಕೋಚ್ ಗೆರ್ವೈಸ್ ಹಕಿಜಿಮಾನ ಸಾವನ್ನಪ್ಪಿದ್ದಾರೆ.
ಕೆಲ್ವಿನ್ ಚಿಕಾಗೋ ಮ್ಯಾರಥಾನ್ ಸ್ಪರ್ಧೆಯಲ್ಲಿ 2:00:35 ನಿಮಿಷದಲ್ಲಿ ಗುರಿ ಮುಟ್ಟಿ ದಾಖಲೆ ಬರೆದಿದ್ದರು. ಈ ಸಾಧನೆಯ ಮೂಲಕ ಅವರು, ಕೀನ್ಯಾದ ಎಲಿಯುಡ್ ಕಿಪ್ಚೋಜ್ (2:01:09) ಅವರ ದಾಖಲೆ ಮುರಿದಿದ್ದರು. ಸದ್ಯ ಈ ತಾರೆ ಕೇವಲ 24ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ಕೆಲ್ವಿನ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ಕಾಣುತ್ತಿದ್ದರು. ಹೀಗಾಗಿ ಅಭ್ಯಾಸ ಮುಗಿಸಿ ಭಾನುವಾರ ರಾತ್ರಿ 11 ಗಂಟೆಗೆ ಕಪ್ಟಗಾಟ್ ನಿಂದ ಎಲ್ಡೊರೆಟ್ ಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿಯೇ ಈ ದುರ್ಘಟನೆ ನಡೆದಿದೆ.
ಸದ್ಯ ವಿಶ್ವದ ಆಟಗಾರರು ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.