ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಸದ್ಯ 2ನೇ ಟೆಸ್ಟ್ ನಡೆಯುತ್ತಿದೆ. ವಿರಾಟ್ ಕೊಹ್ಲಿ ತಮ್ಮ ತಂಡದ ಪರವಾಗಿ ಅದ್ಭುತ ಶತಕವನ್ನು ಬಾರಿಸಿದ್ದಾರೆ. ಈ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 206 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ 121 ರನ್ ಗಳಿಸಿದ್ದಾರೆ. ಟೆಸ್ಟ್ ನಲ್ಲಿ ಇದು ಅವರ 29 ನೇ ಶತಕವಾಗಿದ್ದು, ಒಟ್ಟಾರೆ 76ನೇ ಶತಕ ಗಳಿಸಿದ್ದಾರೆ.
ವೆಸ್ಟ್ ಇಂಡೀಸ್ ಯುವ ಆಟಗಾರ ಜೋಶುವಾ ಡಿ ಸಿಲ್ವಾ ಅವರ ತಾಯಿಗೂ ಇದು ದೊಡ್ಡ ದಿನವಾಗಿತ್ತು. ಏಕೆಂದರೆ ಜೋಶುವಾ ಡಿ ಸಿಲ್ವಾ ಅವರ ತಾಯಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದು, ಎರಡನೇ ದಿನದ ಆಟ ಮುಗಿದ ನಂತರ ಅವರು ಭಾರತೀಯ ಆಟಗಾರನನ್ನು ಭೇಟಿಯಾಗಿ ಮಾತನಾಡಿದರು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಸ್ಟಂಪ್ಸ್ ಮೈಕ್ನಲ್ಲಿ ಜೋಶುವಾ ಡಿ ಸಿಲ್ವಾ ಮಾತನಾಡಿದ್ದು, “ನನ್ನ ತಾಯಿ ನನಗೆ ಫೋನ್ ಮಾಡಿ, ವಿರಾಟ್ ಕೊಹ್ಲಿಯನ್ನು ನೋಡುವ ಉದ್ದೇಶದಿಂದಲೇ ನಾನು ಪಂದ್ಯ ವೀಕ್ಷಿಸಲು ಬರುತ್ತಿದ್ದೇನೆ ಎಂದು ಹೇಳಿ, ತಮ್ಮ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತ ವಿಮಲ್ ಕುಮಾರ್ ಅವರು ಜೋಶುವಾ ಡಿ ಸಿಲ್ವಾ ಅವರ ತಾಯಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ,